ಶಿವಮೊಗ್ಗದಲ್ಲಿ ವಾಹನ ಗ್ಲಾಸ್ ಪುಡಿಗೊಳಿಸಿದ ಕಿಡಿಗೇಡಿಗಳನ ಒಂದೇ ದಿನದಲ್ಲಿ ಬಂಧಿಸಿದ ಪೋಲಿಸರು..!
ಶಿವಮೊಗ್ಗ: ಇಲ್ಲಿನ ಕೆಲವು ಪ್ರದೇಶಗಳಲ್ಲಿ ನಿಲ್ಲಿಸಲಾಗಿದ್ದ ಮಧ್ಯ ರಾತ್ರಿ ವೇಳೆ ಪುಡಿಗಟ್ಟಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಚ್. ಸಿದ್ದಯ್ಯ ರಸ್ತೆ, ಭರ್ಮಪ್ಪನಗರಗಳಲ್ಲಿ ನಿಲ್ಲಿಸಿದ್ದ 12 ಕಾರು, 1 ಅಟೋ ಮತ್ತು 5 ದ್ವಿಚಕ್ರ ವಾಹನಗಳ ವಿನ್ಡೋ ಗ್ಲಾಸ್, ಹಿಂಬದಿಯ ಗ್ಲಾಸ್, ಬೈಕ್’ಗಳ ಹೆಡ್ ಮಾಸ್ಕ್ ಹಾಗು ಹೆಡ್ ಲೈಟ್’ಗಳನ್ನು ಒಡೆದು ಹಾಕಿ, ಚಾಕು ತೋರಿಸಿ ಹೆದರಿಸಿ ಆಶಾಂತಿಯನ್ನು ಉಂಟು ಮಾಡಲು ಯತ್ನಿಸಿದ್ದರು.
ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದ್ದು, ಆರೋಪಿಗಳಾದ ಕೆ.ಆರ್. ಪುರಂನ ಶಾಹಿಲ್ ಖಾನ್(21)ಭರ್ಮಪ್ಪ ನಗರದ ಮನ್ಸೂರ್ ಅಹಮ್ಮದ್(32)ಅವರುಗಳನ್ನು ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಬಂಧಿಸಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 06 ಪ್ರಕರಣಗಳು ಹಾಗೂ ಕೋಟೆ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಸೇರಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಿ ಈ ಕೃತ್ಯದ ಹಿಂದೆ ಇರುವ ವ್ಯಕ್ತಿಗಳ ಬಗ್ಗೆ ತನಿಖೆ ಮುಂದುವರೆದಿದೆ.
News by : Raghu Shikari-7411515737