ಶಿಕಾರಿಪುರ:ರಸಗೊಬ್ಬರ,ಅಗತ್ಯವಸ್ತು ಗಳ ಬೆಲೆ ಕಡಿಮೆ ಮಾಡಬೇಕು: ಗೋಣಿ ಮಾಲತೇಶ್..!

ಶಿಕಾರಿಪುರ:ರಸಗೊಬ್ಬರ,ಅಗತ್ಯವಸ್ತು ಗಳ ಬೆಲೆ ಕಡಿಮೆ ಮಾಡಬೇಕು: ಗೋಣಿ ಮಾಲತೇಶ್..!

ಶಿಕಾರಿಪುರ :ರೈತರ ಹೆಸರಿನಲ್ಲಿ ಪ್ರಮಾಣ ವಚನ‌ ಸ್ವೀಕರಿಸಿದ ಬಿ.ಎಸ್ ವೈ ರೈತರ ಗೊಬ್ಬರ ಬೆಳೆ ಏರಿಕೆ ಮಾಡಿರುವುದು ಖಂಡನೀಯ ಬೆಲೆ‌ ಏರಿಕೆ ಕಡಿಮೆ‌ ಮಾಡದೇ ಇದ್ದಾರೆ ಹೋರಾಟನ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ‌ಅಧ್ಯಕ್ಷ‌ ಗೋಣಿ ಮಾಲತೇಶ್ ಹೇಳಿದರು.

ಪಟ್ಟಣ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ತಾಲೂಕಿನ ಎಲ್ಲಾ ಕಾಮಗಾರಿಗಳಿಗೆ ಸಂಸದರು 30% ರಷ್ಟು ಕಮಿಷನ್ ಪಡೆದು ಟೆಂಡರ್ ನೀಡುತ್ತಾರೆ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಸಿದರು.

ಇತ್ತೀಚೆಗೆ ‌ನಡೆದ ತರಲಘಟ್ಟ, ಚುರ್ಚುಗುಂಡಿ ಗ್ರಾ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಯುವಕರು ಗೆದ್ದಿದ್ದಾರೆ.

ಕಡಿಮೆ ಅಂತರದಲ್ಲಿ ಕೆಲವರು ಸೊಲಾಗಿದೆ ಅದರೆ ಕಾಂಗ್ರೆಸ್ ಪಕ್ಷಕ್ಕೆ ಜನರ‌ ಬೆಂಬಲ ಹೆಚ್ಚಿದೆ ಎಂದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರ ಬರುತ್ತೆ ಬಂದ ತಕ್ಷಣ ಬಿ.ಎಸ್ ಯಡಿಯೂರಪ್ಪ ಜೈಲು ಖಚಿತ ಐದು ಕ್ರಮಿನಲ್‌ ಕೇಸ್ ಗಳಲ್ಲಿ ಬಿ.ಎಸ್ ವೈ ಜಾಮೀನಿನ ಆಧಾರದ‌ ಮೇಲೆ ಹೊರಗಡೆ ಇದ್ದಾರೆ.

ದಿನ ಬಳಕೆಯ ವಸ್ತುಗಳು ಬೆಲೆ ಎಷ್ಟು ಏರಿಕೆಯಾಗಿದೆ ಬಡವರು ಬದುಕುವುದೇ ಕಷ್ಟವಾಗಿದೆ ಮುಂದಿನ ಚುನಾವಣೆ ಜನರು ತಕ್ಕಪಾಠ ಕಳಿಸುತ್ತಾರೆ.

ಕಪ್ಪನಹಳ್ಳಿ ಕ್ಷೇತ್ರವನ್ನು ಈಗ ಸಾಲೂರು ಕ್ಷೇತ್ರ ರಚಿಸಿ ಬದಲಾವಣೆ ಮಾಡಿದ್ದಾರೆ.

ಕಪ್ಪನಹಳ್ಳಿ ತೆಗೆದು ಉಡುಗಣಿ ಎಂದು ಕ್ಷೇತ್ರವನ್ನು ವಿಗಂಡನೆ ಮಾಡಿದ್ದಾರೆ.

ತಾಲೂಕ್ ಪಂಚಾಯತಿ ಕ್ಷೇತ್ರವನ್ನು ಕಡಿಮೆ ಮಾಡಿದ್ದಾರೆ ಅವೈಜ್ಞಾನಿಕವಾಗಿ ಕ್ಷೇತ್ರ ವಿಗಂಡನೆ ನಾವು ಖಂಡಿಸುತ್ತೇವೆ.

ಇಡೀ ಕುಟುಂಬದವೇ ಜೈಲಿಗೆ ಹೊಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಕಾದು ನೋಡಿ ಎಂದರು‌

ಡಿಸೇಲ್ ಪೇಟ್ರೋಲ್ ಬೆಲೆ ದಿನ ಬಳಕೆ ವಸ್ತುಗಳನ್ನು ಬೆಲೆ ಕಡಿಮೆ ಮಾಡಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ರೈತ ವಿರೋಧಿ ಕಾಯ್ದೆಗಳು ಪರಿಣಾಮ ಈಗ ಆರಂಭವಾಗಿದೆ ಯಾರು ಬೇಕಾದರೂ ಕೃಷಿಭೂಮಿ ಖರೀದಿ ಮಾಡುವುದು ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಇದ್ದೇಲ ಈ ಕಾಯ್ದೆಗಳ ಪರಿಣಾಮವಾಗಿದೆ ಮುಂದಿನ ದಿನಗಳಲ್ಲಿ ಇನ್ನು ಸಂಕಷ್ಟಗಳನ್ನು ಜನರು ಎದುರಿಸಬೇಕಾಗುತ್ತದೆ ಎಂದರು‌.

ಸಬ್ಸಿಡಿ ನೀತಿಯಲ್ಲಿ ಬದಲಾವಣೆಯಾಗುತ್ತಿದೆ ಇದನ್ನು ಖಂಡಿಸುತ್ತೇವೆ ಎಸ್ಸಿ ಎಸ್ಟಿ 90% ನೀಡಬೇಕು ಸಾಮಾನ್ಯ 50% ನೀಡಬೇಕು ಎಂದರು.

ಜಿ.ಪಂ ತಾ.ಪಂ ಸಂಪೂರ್ಣ ಕಾಂಗ್ರೆಸ್ ಗೆಲುತ್ತೇವೆ 1993-84 ರ ಚುನಾವಣೆ ಗೆಲುತ್ತೇವೆ ವಿಗಂಡನೆ ನಮಗೆ ಅನೂಕೂಲ ಇದೆ ಎಂದರು.

ನಾಗರಾಜ್ ಗೌಡ ಮಾತನಾಡಿ ರೈತರಿಗೆ ಬೆಂಬಲ ಬೆಲೆ‌ ಘೋಷಣೆ ಮಾಡಿಲ್ಲ ಖರೀದಿ ಕೇಂದ್ರಗಳನ್ನು ತೆರೆಯದೆ ರೈತ ಪರ‌ ಎಂದು ಹೇಳಿಕೊಳ್ಳುತ್ತಾರೆ.

ರೈತ ಸಂಕಷ್ಟ ದಲ್ಲಿ ಇದ್ದು ಈ ಸಮಯದಲ್ಲಿ ಗೊಬ್ಬರ ಬೆಲೆ ಏರಿಕೆ ಮಾಡಿರುವುದು ರಾಜ್ಯದ ಜನತೆ ಶಾಪ ಹಾಕುತ್ತಿದ್ದಾರೆ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಹೋರಾಟವನ್ನು ನಡೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ , ಪುರಸಭಾ ಸದಸ್ಯ ನಾಗರಾಜ್ ಗೌಡ, ಮಾಜಿ ಕಾಡಾ ಅಧ್ಯಕ್ಷ ನಗರದ ಮಹದೇವಪ್ಪ, ಭಂಡಾರಿ ಮಾಲತೇಶ್ , ರಘುನಾಯ್ಕ್‌, ಮಂಜುನಾಯ್ಕ್, ಮಲ್ಲಿನಾಯ್ಕ್‌ , ಪುನೀತ್, ಇದ್ದರು.

News by: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!