ಶಿಕಾರಿಪುರ ಪುರಸಭೆ ಉಪ‌ ಚುನಾವಣೆ ಫಲಿತಾಂಶ ಪ್ರಕಟ ಎಲ್ಲಿ ಯಾರು ವಿನ್ ಎಷ್ಟು ಮತ…?

ಶಿಕಾರಿಪುರ ಪುರಸಭೆ ಉಪ‌ ಚುನಾವಣೆ ಫಲಿತಾಂಶ ಪ್ರಕಟ ಎಲ್ಲಿ ಯಾರು ವಿನ್ ಎಷ್ಟು ಮತ…?

ಶಿಕಾರಿಪುರ ಪಟ್ಟಣ ಮೂರು ವಾರ್ಡ್ ಗಳಲ್ಲಿ ನಡೆದ ಉಪ ಚುನಾವಣೆಯ ಮತದಾನ 29 ರಂದು ನಡೆದಿದ್ದು ಬಾರಿ ಕೂತುಹಲ ಮೂಡಿಸಿದ ಚುನಾವಣೆಯ ಫಲಿತಾಂಶ ಇಂದು ಪ್ರಕಣವಾಗಿದೆ.

ಶಿಕಾರಿಪುರ ಪಟ್ಟಣ 5 ನೇ ವಾರ್ಡ್ ಶೈಲ ಯೋಗೇಶ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು 416 ಮತಗಳನ್ನು ಪಡೆದಿದ್ದು 204
ಅಂತರದಿಂದ ಜಯಗಳಿಸಿದ್ದಾರೆ.

ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಜ್ಯೋತಿ ಸಿದ್ದಲಿಂಗೇಶ್ 212 ಮತ ಗಳನ್ನು ಪಡೆದಿದ್ದು ಸೋಲನ್ನು ಅನುಭವಿಸಿದ್ದಾರೆ.

ವಾರ್ಡ್ 9 ಜಯನಗರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಮೇಶ್ ಗುಂಡ 631ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವೀಣಾ ವಿಜಯಕುಮಾರ್ ವಿರುದ್ಧ 239 ಮತಗಳ ಅಂತರಿಂದ ಜಯಗಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ವೀಣಾ ವಿಜಯ್ 392 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ.

20 ನೇ ಆಶ್ರಯ ಬಡಾವಣೆಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮಾವತಿ 743 ಮತಗಳನ್ನು ಪಡೆದು ಜಯಗಳಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ವಿಜಯಲಕ್ಷ್ಮಿ 473 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ.

ಅಂತರ 270 ಮತಗಳ ಅಂತರದಿಂದ ಗೆಲವು ಸಾಧಿಸಿದೆ ಬಿಜೆಪಿ.

ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿತ್ತು ಕಾಂಗ್ರೆಸ್ ಮತ್ತು ಬಿಜೆಪಿ ಬಾರಿ ಜಿದ್ದಿನ ಚುನಾವಣೆ ನಡೆಸಿದ್ದರು.

ಬಿಜೆಪಿ ಪುರಸಭೆಯ ಅಧಿಕಾರ ಹಿಡಿದಿದ್ದು ಇನ್ನೂ ಅಧಿಕಾರ ನಡೆಸಲು ಸುಲಭವಾಗಿದೆ.

ಕಳೆದ ಚುನಾವಣೆಯಲ್ಲಿ 8 ಸ್ಥಾನವನ್ನು ಬಿಜೆಪಿ ಪಡೆದಿತ್ತು ಕಾಂಗ್ರೆಸ್ 12 ಸ್ಥಾನ 3 ಪಕ್ಷೇತರರು ಮೂರು ಜನ ಕಾಂಗ್ರೆಸ್ ಸದಸ್ಯರು ರಾಜಿನಾಮೆ ನೀಡಿ ತೆರೆವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಈಗ ಎರಡು ಸ್ಥಾನದಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು ಒಟ್ಟು 10 ಸ್ಥಾನಗಳ ಬಲ ಬಿಜೆಪಿ ಹೊಂದಿದ್ದು ಪಕ್ಷೇತರರು ಸೇರಿ 13 ಜನ ಸದಸ್ಯರ ಬಲ‌ ಹೊಂದಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!