ಮಲ ಧಾರಣೆಯಿಂದ ಬರುವ ರೋಗಗಳು…!

ಮಲ ಧಾರಣೆಯಿಂದ ಬರುವ ರೋಗಗಳು…!

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ರೋಗಾನ್ ಅನುತ್ಪಾದನೀಯ ಅಧ್ಯಾಯದಲ್ಲಿ ಬರುವ- ಅಧಾರಣೀಯ ವೇಗಗಳು.

• ಇಂದಿನ ವಿಷಯ-
ಮಲ ಧಾರಣೆಯಿಂದ ಬರುವ ರೋಗಗಳು.

ಬಂದಿರುವ ಬೇಧಿಯನ್ನು ತಡೆಯುವ ಅಭ್ಯಾಸ ಅಪಾಯಕರ

📜 ಶಕೃತಃ…..ಪೂರ್ವೋಕ್ತಾ ಚ ಆಮಯಾಃ ಸ್ಮೃತಾಃ||
-ಅಷ್ಟಾಂಗ ಹೃದಯ, ರೋಗಾನ್ ಅನುತ್ಪಾದನೀಯ ಅಧ್ಯಾಯ-4

ಬಂದಿರುವ ಬೇಧಿಯನ್ನು ತಡೆಯುವ ಅಭ್ಯಾಸ ಇಟ್ಟುಕೊಂಡರೆ ಅಧೋವಾಯುವನ್ನು ತಡೆದಾಗ ಬರುವ ರೋಗಗಳ ಜೊತೆಗೆ ಈ ಕೆಳಗಿನ ಹೆಚ್ಚಿನ 7 ರೋಗಗಳೂ ಸಹ ಬರುತ್ತವೆ.
ಅದರಲ್ಲಿ

  1. ಪಿಂಡಿಕೋದ್ವೇಷ್ಟನ
  2. ಪ್ರತಿಶ್ಯಾಯ
  3. ಶಿರೋರುಜ ಇವುಗಳನ್ನು ಈಗಾಗಲೇ ನೋಡಿದ್ದೇವೆ.

ಇಂದು

  1. ಊರ್ಧ್ವವಾಯು
  2. ಪರಿಕರ್ತಿಕಾ
  3. ಹೃಯದಸ್ಯೋಪರೋಧನ
  4. ಮುಖೇನ ವಿಟ್ ಪ್ರವೃತ್ತಿಃ ಇವುಗಳನ್ನು ನೋಡೋಣ.

🔅 ಊರ್ಧ್ವವಾಯು:
ದೊಡ್ಡಕರುಳಿನಲ್ಲಿ ಉದ್ಭವವಾಗುವ ಪ್ರಾಕೃತ ವಾತವು ಐದು ಭಾಗವಾಗಿ ಶರೀರದ ಎಲ್ಲಾ ಕೆಲಸಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತದೆ. ಅದರಲ್ಲಿ ಕೆಳಮುಖವಾಗಿ ಚಲಿಸಿ ಮಲ, ಮೂತ್ರ, ಗರ್ಭಾದಿಗಳನ್ನು ಹೊರಕ್ಕೆ ತಳ್ಳಬೇಕಾದ ಅಪಾನವಾಯುವು, ಮಲಧಾರಣೆಯ ಕಾರಣ ಮೇಲ್ಮುಖವಾಗಿ ಚಲನೆ ಆರಂಭಿಸಿ ಜಠರ(ಕಫ ಉತ್ಪತ್ತಿ ಸ್ಥಾನ)ದಲ್ಲಿ ಬಂದು ಸೇರುತ್ತದೆ. ಇದನ್ನೇ ಊರ್ಧ್ವವಾಯು ಎನ್ನುವುದು. ಆಗ ಮೂಡಿಬರುವ ಲಕ್ಷಣಗಳೆಂದರೆ-

🔹 ಹೃತ್, ನಾಭಿ, ಪಾರ್ಶ್ವ…….ಕಾಸಃ, ಕಂಠ ಆಸ್ಯ ಶೋಷ…..ಆಮಾಶಯಾಶ್ರಿತ||

ಎದೆ-ಉದರ-ಪಕ್ಕೆಗಳ ನೋವು(gastritis), ಬಾಯಿ ಒಣಗುವಿಕೆ, ಅತಿಯಾದ ತೇಗು, ಕೆಮ್ಮು,ಉಬ್ಬಸ…. ಮುಂತಾದವು ಬಂದಾಗ, ಜನರು ಹೃದಯಾಘಾತ ಎಂದು ಹೆದರುತ್ತಾರೆ. ಆದರೆ ಇದು ಗುದದಿಂದ ಬಂದು ಜಠರದಲ್ಲಿ ಒತ್ತುತ್ತಿರುವ ವಾತವಾಗಿದೆ.

🔅 ಹೃದಯಸ್ಯೋಪಲೇಪ:
ವಾಂತಿಯಾಗುವ ಮುನ್ನ ಆಗುವ ಲಕ್ಷಣಗಳಾದ-
ಅತಿಯಾದ ಆಲಸ್ಯ, ಮನಸ್ಸು ಕೆಲಸ ಮಾಡದೇ ನಿಷ್ಕ್ರಿಯತೆಯನ್ನು ಅನುಭವಿಸುವುದು. ಏನೂ ಬೇಡ ಎನಿಸುವುದು. ಇವೆಲ್ಲಾ ಊರ್ಧ್ವಮುಖಿ ವಾಯುವಿನ ಕೆಲಸ.‌ ತೇಗು ಹೊರಹೋದರೂ, ವಾಂತಿಯಾದರೂ, ಅಸಮಾಧಾನ ಮುಂದುವರಿಯುತ್ತಲೇ ಇರುತ್ತದೆ. ಭೇಧಿಯಾದರೆ ಮಾತ್ರ ಹಿತ ಎನಿಸುವುದು.

🔅 ಮುಖೇನ‌ವಿಟ್ ಪ್ರವೃತ್ತಿ:
ಬಾಯಿಯಿಂದ, ಮಲದ ವಾಸನೆಯ ರೀತಿ ದುರ್ಗಂಧಯುಕ್ತ ತೇಗು, ವಾಂತಿ ಬರುತ್ತದೆ.

🔅 ಪರಿಕರ್ತಿಕಾ:
ಮಲವು ಒಣಗಿ ಹಿಕ್ಕೆಯಂತಾಗಿ,‌ ಬಹು ಒತ್ತಡದಿಂದ ಹೊರಹೋಗುವಾಗ ಗುದದ್ವಾರದ ತುಟಿಗಳು ಸೀಳುತ್ತವೆ. ಆಗ, ಚುಚ್ಚುವುದು, ನೋಯುವುದು, ಮಲ ಹೊರ ಹೋದ ನಂತಹ ಒಂದೆರೆಡು ಗಂಟೆಗಳಕಾಲ ಗುದದ್ವಾರ ಉರಿಯುವುದು. ಇವೆಲ್ಲಾ ಲಕ್ಷಣಗಳನ್ನೇ ಪರಿಕರ್ತಿಕಾ ಎನ್ನುವರು.
ಮಲವನ್ನು ತಡೆದರೂ, ಬಹಳಕಾಲದ ಮಲಬದ್ಧತೆ ಇದ್ದರೂ ಈ ಲಕ್ಷಣ ಕಂಡುಬರುತ್ತದೆ.

🟢 ಪರಿಹಾರ:
ಮಲಬದ್ಧತೆಯನ್ನು ಚಿಕಿತ್ಸಿಸೋಣ, ಆದರೆ ಸಹಜವಾಗಿ, ತಾನಾಗಿ ಬಂದ ಮಲದ ಪ್ರವೃತ್ತಿಯನ್ನು ನೀವಾಗೀ ತಡೆದು ಅಪಾಯವನ್ನು ತಂದುಕೊಳ್ಳದಿರಿ.

♻️ಆರೋಗ್ಯಕ್ಕಾಗಿ ಆಯುರ್ವೇದ ಅನುಸರಿಸಿ♻️

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!