ಶಿವಮೊಗ್ಗ: ಹಣಕಾಸಿನ ತೊಂದರೆ ದೊಡ್ಡಮಟ್ಟದ ಸಾಲ ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಬಳಕೆ: ಸಿಎಂ ಬಿ.ಎಸ್ ವೈ..!

ಶಿವಮೊಗ್ಗ ಜಿಲ್ಲೆಯ ಸೊರಬ ಮೂಗುರು ಕೆರೆ ತುಂಬಿಸುವ ಎತ ನೀರಾವರಿ ಯೋಜನೆ ಲೋಕಾರ್ಪಣೆ ನಡಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿದರು.
ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಈ ವರ್ಷ ಒಳ್ಳೆಯ ಮಳೆಯಾಗಿದೆ ಕೆರೆ ಕಟ್ಟೆಗಳು ತುಂಬಿದೆ ಬರುವ ವರ್ಷ ಕೂಡ ಇದೆ ರೀತಿ ಮಳೆ ಆಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಮಾರ್ಚ್ 8 ರಂದು ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಈ ಸೊರಬ ತಾಲೂಕಿಗೆ ಬರಲೇ ಬೇಕು ಎಂಬ ಆಪೇಕ್ಷೆ ಕುಮಾರ್ ಬಂಗರಪ್ಪ ಕ್ಷೇತ್ರದಲ್ಲಿ 240 ಕೋಟಿ ಕಾಮಗಾರಿ ಚಾಲನೆ ನೀಡಲಾಗಿದೆ.
ಕೋವೀಡ್ ಅತಿವೃಷ್ಠಿ ಇದೆಲ್ಲಾ ಕಾರಣದಿಂದ ಹಣಕಾಸಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಸಾಲ ಪಡೆದು ಬಜೆಟ್ ಮಂಡನೆ ಮಾಡುತ್ತಿದ್ದೇವೆ.
ಮಹಿಳೆಯರಿಗೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚಿನ ಅನೂಕಲ ನೀಡಲಾಗುತ್ತದೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಅಧಿಕಾರಿಗಳು ನಿಗದಿ ಪಡಿಸಿ ಸಮಯದಲ್ಲಿ ಯೋಜನೆ ಅನುಷ್ಠಾನ ಮಾಡಬೇಕು ನೀರಾವರಿ ಯೋಜನೆಗಳ ಯಾವುದೇ ತೊಂದರೆ ಆಗದಂತೆ ಕಾರ್ಯ ನಿರ್ವಹಣೆ ಮಾಡಬೇಕು ಎಂದರು.
ನಾಡಿನ ಸರ್ವಾಂಗೀಣ ಅಭಿವೃದ್ಧಿ ನಮ್ಮ ಸರ್ಕಾರ ಹೊಣೆಯಾಗಿದೆ ಕರ್ನಾಟಕ ಕ್ಷೇತ್ರದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ನಾವು ಗಮನ ನೀಡಬೇಕಾಗಿದೆ ಎಂದರು.