ಹೈಪೋಥೈರಾಯ್ಡಿಸಮ್ ಪೂರ್ಣ ಗುಣಪಡಿಸಬಹುದಾದ ಅವಸ್ಥೆ…!

ಹೈಪೋಥೈರಾಯ್ಡಿಸಮ್ ಪೂರ್ಣ ಗುಣಪಡಿಸಬಹುದಾದ ಅವಸ್ಥೆ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಹೈಪೋಥೈರಾಯ್ಡಿಸಮ್ ಪೂರ್ಣ ಗುಣಪಡಿಸಬಹುದಾದ ಅವಸ್ಥೆ…!

ಇಂದು ಬಹಳಷ್ಟು ಮಹಿಳೆಯರನ್ನು ಕಾಡುವ ಹೈಪೋಥೈರಾಯ್ಡಿಸಮ್ ಗೆ ಕಾರಣ ಥೈರಾಯ್ಡ್ ಅಥವಾ ಪಿಟ್ಯುಟರಿ ಗ್ರಂಥಿಯಲ್ಲ, Levo-Thyroxine (25mcg, 50mcg, 100mcg) ಮಾತ್ರೆ ಸೇವನೆ ಪರಿಪೂರ್ಣ ಚಿಕಿತ್ಸೆಯೇ ಅಲ್ಲ‼️

🙄 ಅಚ್ಚರಿಯೇ?

👉 ಈ ರೋಗದ ಮೂಲ ಕಾರಣ ಯಕೃತ್ತಿನಲ್ಲಿ ಮತ್ತು ಮೂಳೆಯ ಒಳಭಾಗದ ಮಜ್ಜಾದಲ್ಲಿರುತ್ತದೆ. (Liver and Bone marrow) ಈ ಕಾರಣಗಳನ್ನು ಗಮನಿಸಿ ಚಿಕಿತ್ಸಿಸಿದರೆ 6-12ತಿಂಗಳಿನಲ್ಲಿ ಸಂಪೂರ್ಣ ಗುಣಪಡಿಸಬಹುದು.

ಹೈಪೋಥೈರಾಯ್ಡಿಸಮ್ ಗೆ ಕಾರಣ ತಿಳಿದಿಲ್ಲ ಎಂದು ಹೊರಗಿನಿಂದ ಹಾರ್ಮೋನ್ ಮಾತ್ರೆ ಕೊಡುತ್ತಾ ಹೋದರೆ ಕಾಲಾಂತರದಲ್ಲಿ ಶರೀರವನ್ನು ಬೇಗ ಜೀರ್ಣಿಸಿಬಿಡುತ್ತದೆ.

👀 ಗಮನವಿಟ್ಟು ಸೂಕ್ಷ್ಮವಾಗಿ ಓದಿರಿ.

ಈ ಶರೀರದಲ್ಲಿ “ರಸಧಾತು” ಎಂಬ ದ್ರವರೂಪದ ಪೋಷಕ ಅಂಶ ಇದೆ. ಆಹಾರದಿಂದ ಉಂಟಾದ ಈ ರಸವನ್ನು ಮಿಸೆಂಟ್ರಿಕ್ ವೇನ್ ಗಳು ಹೀರಿ ತಂದು ಯಕೃತ್ ಗೆ ಕೊಡುತ್ತವೆ, ಯಕೃತ್ ಅದನ್ನು ವಿಶೇಷ ರೂಪದಿಂದ ರಕ್ತದೊಂದಿಗೆ ಬೆರೆಸುತ್ತದೆ.
ಹೀಗೆ ಯಕೃತ್ತಿನ ಸಹಕಾರದಿಂದ ರಕ್ತದೊಂದಿಗೆ ಒಂದಾದ ರಸವು ಸರ್ವಶರೀರ ಸಂಚಾರ ಮಾಡುತ್ತ ಎಲ್ಲಾ ಅವಯವಗಳನ್ನೂ ಪೋಷಣೆ ಮಾಡುತ್ತದೆ ಮತ್ತು ವಿಶೇಷವಾಗಿ “ಚರ್ಮ, ಅಸ್ಥಿಸಂಧಿ, ಸ್ತ್ರೀಯರಲ್ಲಿ ಮುಟ್ಟಿನ ರೂಪದಲ್ಲಿ, ಎದೆಹಾಲಿನ ರೂಪದಲ್ಲಿಯೂ ಇರುತ್ತದೆ”

ಈ ಶರೀರದಲ್ಲಿ “ಮಜ್ಜಾಧಾತು” ಎಂಬುದು ಮೂಳೆಯ ಒಳಗೆ ಇದ್ದು “ಮೂಳೆಯನ್ನು ದೃಢವಾಗಿಡುತ್ತದೆ ಮತ್ತು ಇದು ಎಲ್ಲಾ ರೀತಿಯ ರಕ್ತಕಣಗಳನ್ನು ಉತ್ಪತ್ತಿ ಮಾಡುತ್ತದೆ.”

👀 ಇವೆರಡರ ಕಾರ್ಯದ ಆಧಾರದಲ್ಲಿ ಹೈಪೋಥೈರಾಯ್ಡಿಸಮ್ ಇದ್ದವರು ಗಮನಿಸಿನೋಡಿ:

ರಸಧಾತು ಕೊರತೆಯಿಂದ-
(ರಸ-ರಕ್ತ ಒಂದುಗೂಡಿಸುವಿಕೆಯನ್ನು ಯಕೃತ್ತ್ ಸರಿಯಾಗಿ ಮಾಡದೇ ಹೋದರೆ, ಗುರು, ಆಮ ರಸ ಉಂಟಾಗಿ, ಪ್ರಮಾಣದಲ್ಲಿ ರಸದ ಕೊರತೆ ಇರದಿದ್ದರೂ ಗುಣಾತ್ಮಕವಾಗಿ ರಸಧಾತು ಕಡಿಮೆಯಾಗುವುದು)
• ಚರ್ಮ ಸುಕ್ಕಾಗುವುದು
• ಕೂದಲು ಉದುರುವವು
• ಮುಟ್ಟು ಕಡಿಮೆ/ಇಲ್ಲವಾಗುವುದು
• ಎದೆಹಾಲು ಕಡಿಮೆ/ಇಲ್ಲವಾಗುವುದು
• ಶರೀರ ದಪ್ಪ ಆಗುವುದು
• ಅಸ್ಥಿಸಂಧಿಗಳು ನೋಯುವುದಿಲ್ಲ ಬದಲಾಗಿ ಶಕ್ತಿಗುಂದಿ ಆಯಾಸ ಎನಿಸುವವು.

ಹಾಗೆಯೇ,
◆ ಮಜ್ಜಾಧಾತುವಿನಲ್ಲಿ ಸರಿಯಾದ ರಕ್ತ ಉತ್ಪತ್ತಿ ಆಗದ ಕಾರಣ-
• ರಕ್ತಕಣಗಳ ಸಂಖ್ಯೆ ಮತ್ತು ಗಾತ್ರ ಕಡಿಮೆ ಆಗುವುದು.
• ಆ ಕಾರಣಕ್ಕೆ ಅನಿಮಿಯಾ ಬರುವುದು.
• ಕ್ರಮೇಣ ಮೂಳೆಗಳು ಸವೆಯುತ್ತವೆ.
• ಮೂಳೆಯ ಅಂಶವೇ ಆದ ಹಲ್ಲುಗಳು ದುರ್ಬಲ ಗೊಳ್ಳುವವು(ಅವರ ಮಕ್ಕಳ ಹಲ್ಲುಗಳೂ ದುರ್ಬಲಗೊಳ್ಳುವವು) .
• ಉಗುರುಗಳು ಸ್ವಲ್ಪ ಜೋರಾಗಿ ಬೆಳೆಯುವವು.

••••••

ಇವೆಲ್ಲಾ ಲಕ್ಷಣ ಇರುವುದು ಸತ್ಯ ಎಂದಾದರೆ ಚಿಕಿತ್ಸೆ ಎಲ್ಲಿಗೆ ಮಾಡಬೇಕು? ಮತ್ತು ಈಗ ಯಾವ ಅಂಗವನ್ನು ಗಮನಿಸಿ ಮಾತ್ರೆ ಸೇವಿಸುತ್ತಿದ್ದೇವೆ?!!

🤐 ಪಾಪ ಬಡಪಾಯಿ ಥೈರಾಯ್ಡ್ ಗ್ರಂಥಿಯು ತಾನು ಕೆಡದಿದ್ದರೂ ‘ನಿಷ್ಕ್ರಿಯ’ ಎನಿಸಿಕೊಳ್ಳಬೇಕಾಗಿದೆ.

👉 ನಿಜವಾದ ಸಮಸ್ಯೆ ಹೀಗಿದೆ:
ಸದಾ ಚಲನೆಯಲ್ಲಿ ಇರಬೇಕಾದ ರಸಧಾತು ಸಂಪೂರ್ಣ/ ನಿಃಶ್ಯೇಷವಾಗಿ ಜೀರ್ಣವಾಗದೇ ಅದರ ಸ್ನಿಗ್ಧ, ಗುರುಭಾಗ ಉಳಿಯಲು ಆರಂಭಿಸುತ್ತದೆ, ನಿಧಾನವಾಗಿ ಸರ್ವ ಧಾತುಗಳಿಗೂ ಹರಡುತ್ತಾ ಗುರುಧಾತು ಮಾಂಸವನ್ನೂ ಸ್ನಿಗ್ಧಧಾತು ಮೇದಸ್ಸನ್ನೂ ಆಶ್ರಯಿಸಿ ಕುಳಿತುಬಿಡುತ್ತದೆ. ಆಗ ಚರ್ಮ ದಪ್ಪ ಅಥವಾ ಸುಕ್ಕಾಗುತ್ತದೆ, ಕೂದಲು ಉದುರುತ್ತದೆ, ಮುಟ್ಟು ಸರಿಪ್ರಮಾಣದಿಂದ ಹೋಗುವುದಿಲ್ಲ. ತೂಕ ಹೆಚ್ಚುತ್ತದೆ. ಕಾಲಾನಂತರ ಮುಂದಿನ ಅಸ್ಥಿ ಮತ್ತು ಮಜ್ಜೆ ಸರಿಯಾಗಿ ಉತ್ಪತ್ತಿಯಾಗುವುದಿಲ್ಲ. ರಕ್ತಕಣಗಳನ್ನು ಉತ್ಪತ್ತಿಮಾಡಲು ಅಸಮರ್ಥವಾಗುತ್ತದೆ. ಇಲ್ಲಿಂದ ಮುಂದೆ ನಿಜವಾದ ಹೈಪೋಥೈರಾಯ್ಡಿಸಮ್ ಪ್ರಕ್ರಿಯೆ ಆರಂಭ.
(Sodium–hydrogen antiporter is not getting stimulated due to “hardness or thickness of cell membrane” it actually ceases or obstacle the thyroid gland to secretion)

ಚಿರಕಾಲದ ಘನರೂಪದ
ರಸಧಾತುವನ್ನು ಪಚನಮಾಡುವುದೇ ನಿಜವಾದ ಚಿಕಿತ್ಸೆ, ಇಲ್ಲಿ ಪೋಷಣೆಯನ್ನೂ ಉಳಿಸಿಕೊಂಡು, ಹೆಚ್ಚಿರುವುದನ್ನೂ ಕರಗಿಸಬೇಕು. ಇದು ಅಟೋಇಮ್ಯೂನ್ ಕಾಯಿಲೆ ಆಗಿಯೂ ಬದಲಾಗಬಹುದು. ಯಕೃತ್ ಉದ್ದೇಶ ಇಟ್ಟುಕೊಂಡೇ ರಸ ಚಿಕಿತ್ಸೆ ಮಾಡಬೇಕು.

👉 ಪರಿಹಾರ ಏನು?
ರಸ, ಮಾಂಸ, ಮೇದಧಾತು ಕರಗಬೇಕು, ಆದರೆ ಯಾವುದೇ ಕಾರಣಕ್ಕೂ ಕ್ಷೀಣ ಆಗಬಾರದು, ಕ್ಷೀಣವಾದರೆ ಅಸ್ಥಿ ಮಜ್ಜೆಗೆ ಪೋಷಣಾಭಾವದಿಂದ ತೀವ್ರ ತೊಂದರೆಯಾಗುತ್ತದೆ, ಶರೀರ ದುರ್ಬಲಗೊಳ್ಳುತ್ತದೆ.
ಇಂತಹ ವಿರುದ್ಧ ಕಾರಣ ಇರುವ ಕಾಯಿಲೆಗೆ ಆಯುರ್ವೇದ ಚಿಕಿತ್ಸೆಯೇ ಪರಿಹಾರ, ಏಕೆಂದರೆ ಈ ರೀತಿಯ ರೋಗ ಉತ್ಪತ್ತಿಯ ವಿವರಣೆ ಆಯುರ್ವೇದದಲ್ಲಿ ಮಾತ್ರ ಇದೆ. ಸೂಕ್ಷ್ಮಮತಿಯಾದ ಆಯುರ್ವೇದ ವೈದ್ಯ ಪೂರ್ಣ ಪರಿಹರಿಸಬಲ್ಲ.

ಕೇವಲ Levo thyroxine ಸೇವನೆ ಒಂದು ಬಾಲಿಷ ಪರಿಹಾರ. ಏಕೆಂದರೆ ಇದರಿಂದ ಆರಂಭದಲ್ಲಿ ಶರೀರ ಸ್ವಲ್ಪ ಹಗುರ ಎನಿಸಬಹುದು, ಮುಂದೆ ಇದು ಹೀಗೇ ಎಂದು ನಾವು ಒಪ್ಪಿಕೊಂಡು ಬಿಡುತ್ತೇವೆ. TSH report ಸರಿ ತೋರಿಸಬಹುದು. ಬೇಗ ಮುಪ್ಪಾಗುವಿಕೆಯನ್ನು ತಡೆಯಲು ಅಸಾಧ್ಯ.

ಇನ್ನು ಕೆಲವು ರೋಗಿಗಳು ಕಾಂಚನಾರ ಗುಗ್ಗುಲು, ವರುಣಾದಿ ಕಷಾಯದಂತಹ ಪೋಷಣೆ ರಹಿತವಾಗಿ ಕೇವಲ ಮೇದ ಕರಗಿಸುವ, ತೂಕ ಇಳಿಸುವ ಆಯುರ್ವೇದ ಔಷಧ ಸೇವನೆ ಮಾಡಿ ಬಹಳ ತೊಂದರೆ ತಂದುಕೊಂಡು ಆಯುರ್ವೇದವನ್ನೇ ದೂರುವವರು ಇದ್ದಾರೆ, ಇಲ್ಲಿ 5% ಅವಸ್ಥೆಯಲ್ಲಿ ಮಾತ್ರ ಇವೆರಡೂ ದ್ರವ್ಯಗಳ ಅವಶ್ಯಕತೆ ಇದೆ (ಅಂದರೆ, ಮೇದ ಪ್ರಧಾನ ರೋಗಿಗಳಲ್ಲಿ ರಸೋತ್ಪತ್ತಿ ವ್ಯತ್ಯಾಸವಾದಾಗಲೂ, ಮೇದಸ್ಸು ಬಲ ಕಳೆದುಕೊಳ್ಳದೇ ಇರುವ ಸ್ಥೂಲ ರೋಗಿಗಳಿಗೂ ಮತ್ತು ಅನುವಂಶೀಯವಾಗಿ ಮೇದ ಚನ್ನಾಗಿರುವವರಲ್ಲಿಯೂ ಉಂಟಾದ ಹೈಪೋಥೈರಾಯ್ಡಿಸಮ್ ಇದ್ದಾಗ ಮಾತ್ರ)
ಇದರ ಹೊರತು ಅಪತರ್ಪಣ(ಮೇದವನ್ನು ಕರಗಿಸುವ) ಚಿಕಿತ್ಸೆ ಪ್ರಧಾನವಲ್ಲ, ಅವಶ್ಯಕತೆಯಿಲ್ಲ.

ಸಂಪೂರ್ಣ ಗುಣಪಡಿಸಿಕೊಳ್ಳಲು ತಾಳ್ಮೆ, ಶ್ರದ್ಧೆ ಮತ್ತು ಆಹಾರ ಪಾಲನೆ ಅತೀ ಮುಖ್ಯ.

👉 ಮನೆಯಲ್ಲಿಯೇ ಮಾಡುವ ಪರಿಹಾರ ಏನು:
• ಬೇಗ ಮಲಗಿ-ಬೇಗ ಏಳಿ
• ಕಾಫಿ-ಚಹಾ ಸೇವನೆ ಪೂರ್ಣ ನಿಲ್ಲಿಸಿ
• ಪೋಷಕಾಂಶ ಇರುವ, ಆದರೆ ಜೀರ್ಣಕ್ಕೆ ಕಷ್ಟವಲ್ಲದ ಅಲ್ಪಪ್ರಮಾಣದ ಆಹಾರ ಸೇವನೆ ಮಾಡಿ
• ಮೈದಾ, ಸಕ್ಕರೆ, ಉದ್ದು, ಗೋಬಿ, ಕರಿದ, ವಗ್ಗರಣೆ ಕಲಸಿದ ಅನ್ನ ನಿಲ್ಲಿಸಿ
• ಗೋಧಿ ಸೇವನೆ ಯೋಗ್ಯ(ಚಪಾತಿ ರೂಪದಲ್ಲಿ ಅಲ್ಲ)
• ತೂಕ ಇಳಿಸಲು ತೃಣಧಾನ್ಯ(ಸಿರಿಧಾನ್ಯ) ಅಗತ್ಯ ಇಲ್ಲ
• ಹಗಲು ನಿದ್ದೆ ಬೇಡವೇ ಬೇಡ.
• ತೀವ್ರ ತೆರನಾದ ವ್ಯಾಯಾಮ ವ್ಯರ್ಜ
• ದಿನಕ್ಕೆ ಹತ್ತಾರು ಕಿ.ಮೀ ನಡೆಯುವುದು ಮೂಳೆ ಸವೆತಕ್ಕೆ ದಾರಿ ಅಷ್ಟೆ

👍 ಶ್ರೇಷ್ಠ ಉಪಾಯ:
ಈಜುವುದು ಅತ್ಯಂತ ಉಪಾಯಕರ ವ್ಯಾಯಾಮ🏊‍♂

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!