ಶಿಕಾರಿಪುರ :ಗ್ರಾಮ ಪಂಚಾಯತಿ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿಳಿಗೆ ಸನ್ಮಾನ…!

ಶಿಕಾರಿಪುರ :ಗ್ರಾಮ ಪಂಚಾಯತಿ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿಳಿಗೆ ಸನ್ಮಾನ…!

ಶಿಕಾರಿಪುರ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಜಯಗಳಿಸಿದ‌ ಪಾರಜಿತರಾದ ಅಭ್ಯಾರ್ಥಿಗಳಿಗೆ ಸೋಮವಾರ ಸನ್ಮಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನಕುಮಾರ್
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಅನೇಕ ಜನರ ಸಮಸ್ಯೆಗಳನ್ನ ಅರಿತು ಅವರಲ್ಲಿ ಬೆರೆತು ಅವರಿಗೆ ನ್ಯಾಯ ದೊರಕಿಸಿದ ಪರಿಣಾಮವಾಗಿ ಇಂದು ಸದಸ್ಯರಾಗಿದ್ದೀರಿ ಎಂದರು.

ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಮಂಡಲ ಪಂಚಾಯ್ತಿ ನಿಯಮಗಳನ್ನು ರದ್ದುಗೊಳಿಸಿ, ದೇಶದ ಎಲ್ಲಾ ರಾಜ್ಯಗಳ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ವ್ಯವಸ್ಥೆಯನ್ನು ಜಾರಿಗೆ ತಂದು, ಗ್ರಾಮೀಣ ಪ್ರದೇಶದ ಜನರಿಗೆ ಅಧಿಕಾರ ನಡೆಸುವಂತಹ ಭಾಗ್ಯ ದೊರೆತಿದೆ.

ಸಂವಿಧಾನದ 73 ಮತ್ತು 74 ನೇ ಕಾಯ್ದೆಯನ್ನು ತಿದ್ದುಪಡಿ ಮಾಡುವುದರ ಮೂಲಕ, ಎಲ್ಲಾ ವರ್ಗದ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದೆ.

ಮನಮೋಹನ್ ಸಿಂಗ್ ರವರು ಪ್ರಧಾನ ಮಂತ್ರಿಯಾಗಿದ್ದಾಗ ಸೋನಿಯಾಗಾಂಧಿಯವರ ಸೂಚನೆ ಮೇರೆಗೆ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಮಹೆಳೆಯರೂ ಕೂಡ ಸ್ಪರ್ಧಿಸುವಂತಾಗಿದೆ.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಚೇದಿನ್ ಆಯೇಗಿ ಎಂಬ ಮಾತು ಕೇಳಿ ಬಂದಿತ್ತು ಆದರೆ,  ಅಚ್ಚೇದಿನ್ ಬಂದಿರುವುದು ಅನಿಲ್ ಅಂಬಾನಿ ಮುಖೇಶ್ ರಂತಹ ದೊಡ್ಡ ದೊಡ್ಡ ಉದ್ಯಮಿಗಳಿಗೆ ಬಂದಿದೆ.

ಹದಿನೈದು ಲಕ್ಷ ರೂಪಾಯಿಗಳು ದೇಶದ ಪ್ರತಿಯೊಬ್ಬ ಪ್ರಜೆಗೂ ಅವರವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು ಇದೂವರೆಗೂ ಯಾರೊಬ್ಬರಿಗೂ ಒಂದು ರೂಪಾಯಿ ಹಣ ಬಂದಿಲ್ಲ.

ದೇಶವು ಕೊರೋನ ಸಂಕಷ್ಟದಲ್ಲಿದ್ದಾಗ ಅದರ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ.

ಕೃಷಿ ಕಾಯ್ದೆಯನ್ನು ಜಾರಿಗೆ ತಂದು ದೇಶದ ಕೋಟ್ಯಂತರ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಭೂಮಿ ಸಿಗದಂತೆ ಮಾಡಲಾಗುತ್ತಿದೆ.

ಅನೇಕ ರೈತರು ಹಲವಾರು ದಿನಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಹನ್ನೊಂದು ಬಾರಿ ಮಾತುಕತೆ ನಡೆಸಿದ್ದಾರೆ ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಮನಮೋಹನ್ ಸಿಂಗ್ ರವರು ಪ್ರಧಾನ ಮಂತ್ರಿಯಾಗಿದ್ದಾಗ ಅನೇಕ ರೈತರ ಸುಮಾರು 72 ಸಾವಿರ ಕೋಟಿ ರೂಪಾಯಿಗಳ ಸಾಲ ಮಾಡಲಾಗಿದೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕೆಪಿಸಿಸಿ ವಕ್ತಾರ ಶಾಂತವೀರಪ್ಪ ಗೌಡ, ಇನ್ನೋರ್ವ ವಕ್ತಾರೆ ಹಾಗೂ ವೀಕ್ಷಕಿ ನಂದಾ, ಮಾಜಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಜಿಲ್ಲಾ ಪಂಚಾಯತ್ ಸದಸ್ಯ ನರಸಿಂಗ್ ನಾಯ್ಕ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಗೀತಾ ರಾಜಪ್ಪ, ಪುರಸಭಾ ಸದಸ್ಯರಾದ ನಾಗರಾಜ್ ಗೌಡ, ಉಳ್ಳಿ ದರ್ಶನ್, ಗೋಣಿ ಪ್ರಕಾಶ್, ರೋಷನ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿಯ ಸದಸ್ಯರು ಅಭಿಮಾನಿಗಳು ಹಾಜರಿದ್ದರು.

 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಕೆಪಿಸಿಸಿ ವಕ್ತಾರ ಶಾಂತವೀರಪ್ಪ ಗೌಡ ಸೇರಿದಂತೆ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮತ್ತು ಪರಾಭವಗೊಂಡ ಪ್ರತಿಯೊಬ್ಬರಿಗೂ ಸನ್ಮಾನಿಸಲಾಯಿತು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!