ಶಿವಮೊಗ್ಗ: ನಿಗೂಢ ಶಬ್ದದ ಕಾರಣ ಭೂಕಂಪನ ಅಲ್ಲ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಪೋಟ….!
ಶಿವಮೊಗ್ಗ :ಶಿವಮೊಗ್ಗದಲ್ಲಿ ಮತ್ತು ಚಿಕ್ಕಮಗಳೂರಿನಲ್ಲಿ ಕೇಳಿಬಂದ ನಿಗೂಢ ಶಬ್ದಕೇಳಿಬಂದ ನಡುವೆ ತಾಲೂಕಿನ ಹುಣಸೋಡು ಬಳಿ ನಡೆಯುತ್ತಿರುವ ಕಲ್ಲುಕೋರೆಯಲ್ಲಿ ಸ್ಪೋಟ ಎಂದು ತಿಳಿದ್ದು ಬಂದಿದೆ.
ಈ ಸ್ಫೋಟ ಜಿಲಿಟಿನ್ ನಿಂದ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಸ್ಪೋಟದಲ್ಲಿ 8 ಕ್ಕೂ ಸಧ್ಯಕ್ಕೆ ಸಾವನ್ನಪ್ಪಿದ್ದು ತಿಳಿದುಬಂದಿದ್ದರೂ ಸಹ ಈ ಕುರಿತು ಜಿಲ್ಲಾಡಳಿತ ಯಾವುದೇ ಸ್ಪಷ್ಟನೆ ನೀಡಿಲ್ಲ.
ಜೊತೆಗೆ ಈ ನಿಗೂಢ ಶಬ್ದಕ್ಕೂ ಸ್ಪೋಟಕ್ಕೂ ಏನಾದರು ತಾಳೆ ಆಗುತ್ತಿದೆಯಾ ಎಂಬ ಮಾಹಿತಿಯನ್ನ ಅರಿಯಲು ಬೆಂಗಳೂರಿನಿಂದ ತಜ್ಞರ ತಂಡ ನಾಳೆ ಆಗಮಿಸುತ್ತಿದ್ದಾರೆ.
ಹುಣಸೋಡು, ಕಲ್ಲುಗಂಗೂರು ನಡುವೆ ಇರುವ ರೈಲ್ವೆ ಕ್ರಶರ್ ಹಿಂಭಾಗದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ.
ಈ ಸ್ಪೋಟದಲ್ಲಿ ಸಾವುನೋವುಗಳು ಉಂಟಾಗಿದೆ. ನಿಗೂಢ ಶಬ್ದಕ್ಕೂ ಹಾಗೂ ಇಲ್ಲಿನ ಸ್ಪೋಟದ ಕುರಿತು ಇಂದು ಬೆಂಗಳೂರಿನಿಂದ ತನಿಖಾ ತಂಡ ಬರಲಿದೆ ಸ್ಪಷ್ಟವಾಗಿ ತಿಳಿಯಲಿದೆ ಎಂದರು.
ಅಕ್ರಮ ಕಲ್ಲುಗಣಿಗಾರಿಕೆಯ ಕೂಗು ಸಹ ಕೇಳಿಬರುತ್ತಿದೆ. ಆದರೆ ಇವನೆಲ್ಲಾ ತನಿಖೆಯ ನಂತರ ತಿಳಿದುಬರಲಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
ಬೊಲೆರೋ ವಾಹನದಲ್ಲಿ ಬಂದ ವ್ಯಕ್ತಿಗಳು ಸ್ಫೋಟಕ ವಸ್ತುಗಳನ್ನ ಇಟ್ಟುಕೊಂಡು ಬೀಡಿ ಸಿಗರೇಟು ಹಚ್ಚಿಕೊಂಡ ಪರಿಣಾಮ ದೊಡ್ಡಪ್ರಮಾಣದಲ್ಲಿ ಸ್ಫೋಟವಾಗಿದೆ ಎಂಬುದು ಸುತ್ತಮುತ್ತಲಿನ ಗ್ರಾಮಸ್ಥರ ದೂರಾಗಿದೆ.