ಇಂದಿನ ವಿಷಯ:ಮಕ್ಕಳನ್ನು ಕಾಡುವ ನೆಗಡಿ-ಅಸ್ತಮಾ…!

ಇಂದಿನ ವಿಷಯ:ಮಕ್ಕಳನ್ನು ಕಾಡುವ ನೆಗಡಿ-ಅಸ್ತಮಾ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️:

ನೀವು ಕೇವಲ ನೆಗಡಿ ನಿಲ್ಲುವ ಮಾತ್ರೆಗಳಾದ ಸಿಟ್ರಿಝನ್, ಲಿವೋಸಿಟ್ರಿಝನ್, ಮೊಂಟ್ಯಾಲುಕಾಸ್ಟ್ ಅನ್ನು ಬಳಸುತ್ತಿರುವಿರಾದರೆ ಎಚ್ಚರ! ಮುಂದೊಮ್ಮೆ ಇದು ಅಸ್ತಮಾ ಆಗಿ ಬದಲಾಗುವ ಸಾಧ್ಯತೆಯೇ ಹೆಚ್ಚು!!
ಯಾವುದೇ ಹಿಸ್ಟಮಿನ್ ನಿಯಂತ್ರಕ ಮಾತ್ರೆಯು ನಮ್ಮ ಉಸಿರ್ನಾಳದಲ್ಲಿ ಊತವನ್ನುಂಟುಮಾಡುತ್ತದೆ. ಕಾಲಕ್ರಮದಲ್ಲಿ ಅದು ಅಸ್ತಮಾಕ್ಕೆ ತಿರುಗುತ್ತದೆ ಅಥವಾ ಚರ್ಮದ ತೊಂದರೆಯನ್ನುಂಟುಮಾಡುತ್ತದೆ.
••••••••••••••••••••••••••••••••••

ಇಂದಿನ ಹೆಚ್ಚಿನ ಪೋಷಕರ ಬಹುದೊಡ್ಡ ಚಿಂತೆ ಇದು-

“ನಮ್ಮ ಮಕ್ಕಳಿಗೆ ಶೀತವೇ ಹೋಗುತ್ತಿಲ್ಲ ಎಂಬುದು”

ಶೀತ ಕಾಣಿಸಿಕೊಳ್ಳುವ ಸ್ಥಾನಕ್ಕೆ ಚಿಕಿತ್ಸೆ ಮಾಡುವುದನ್ನು ಬಿಟ್ಟು ಉತ್ಪತ್ತಿಯಾಗುವ ಸ್ಥಾನವನ್ನು ನೋಡಬೇಕು, ಹಾಗಾದರೆ ಮಾತ್ರ ಹೇಗೆ ನಿವಾರಿಸಿಕೊಳ್ಳಬಹುದು ಎಂದು ತಿಳಿಯುತ್ತದೆ.
ನೆಗಡಿಯ ಮೂಲ ಇರುವುದು ‘ಮೂಗು, ಗಂಟಲು, ಉಸಿರ್ನಾಳ, ಪುಪ್ಫುಸಗಳಲ್ಲಿ ಅಲ್ಲ!! ಅವು ಕೇವಲ ವ್ಯಕ್ತಸ್ಥಾನಗಳು. ಹಾಗಾಗಿ ಮೂಗು ಪುಪ್ಫುಸಗಳಿಗೆ ಔಷಧಿ ಕೊಟ್ಟಷ್ಟೂ ಕಫ ಸಂಚಯವಾಗುತ್ತಾ ಹೋಗುತ್ತದೆ.
ನೆಗಡಿಗೆ ಔಷಧ ಸೇವಿಸಿದ ಮರುದಿನ ಗಂಟಲು ದಪ್ಪವಾಗುವುದು ಮತ್ತು ಕೆಮ್ಮು ಬರುವುದನ್ನು ತಾವೆಲ್ಲಾ ಗಮನಿಸಿದ್ದೀರಿ.

🎗 ಈ ನೆಗಡಿಗೆ ಎರಡು ಮೂಲಗಳಿವೆ
1)ಸಣ್ಣಕರುಳಿನ ಆರಂಭದ ಭಾಗವಾದ ಗ್ರಹಣಿ(ಡಿಯೋಡಿನಮ್)
ಮತ್ತು
2)ದೊಡ್ಡ ಕರುಳು.
•••••
ಗ್ರಹಣಿ ಅಂದರೆ ಪಾಚಕ ಅಗ್ನಿ ಎಂದರ್ಥ, ಅದರ ಕೆಲಸ- ಸೇವಿಸಿದ ಆಹಾರವನ್ನು ಫೇನಕಫವಾಗಿಸಿ(ಗಾಜಿನಂತೆ ಹೊಳಪುಳ್ಳ ಪಾರದರ್ಶಕವಾಗಿರುವ ಶುದ್ಧಕಫ) ಅಂದರೆ ಶರೀರಕ್ಕೆ ಬೇಕಾದ ರೀತಿಯಲ್ಲಿ ದ್ರವೀಕರಣಗೊಳಿಸಿ, ರಕ್ತವು ಅದನ್ನು ಹೀರಿಕೊಳ್ಳುವಂತೆ ತಯಾರಿಸುವುದು.


ಗ್ರಹಣಿಯ ಶಕ್ತಿ ಕುಂದಿದಾಗ ಆಹಾರ ಸಂಪೂರ್ಣ ವಿಭಜನೆಗೊಳ್ಳುವ ಬದಲು ಗಟ್ಟಿದ್ರವವಾಗುತ್ತದೆ. ಹೀಗೆ ಅಸಂಪೂರ್ಣ ವಿಭಜಿತ ಆಹಾರವನ್ನು ಫೇನಕಫ ಎನ್ನಲಾಗದು, ಅದು ಮಲಕಫ(ಗುರುಕಫ)ವಾಗುತ್ತದೆ. ಇದು ನಿಧಾನವಾಗಿ ಉದರ ಕರುಳುಗಳಿಗೆ ತೊಂದರೆಯನ್ನುಂಟುಮಾಡಿ, ಕಡಿಮೆ‌ ಆಹಾರ ಸೇವಿಸಿವಂತೆ, ಅಕಾಲದಲ್ಲಿ ಭಯಂಕರ ಹಸಿವನ್ನುಂಟುಮಾಡುವಂತೆ ಹಾಗೂ ಮಲಬದ್ಧತೆಯನ್ನುಂಟುಮಾಡುತ್ತಲೂ, ಆಗಾಗ ದ್ರವಮಲಹೋಗುವಂತಲೂ ಮಾಡುತ್ತದೆ.


•••••
ಗ್ರಹಣಿ ಈ ರೀತಿಯ ವಿಕೃತಿ ಇದ್ದಾಗ,
ದೊಡ್ಡಕರುಳಿನಲ್ಲಿ ಉತ್ಪತ್ತಿಯಾಗುವ ವಾತವು ವಿಕೃತ ಚಲನೆಯನ್ನಾರಂಭಿಸಿದರೆ ಅಥವಾ ಹಿಸ್ಟಮಿನ್ ನಿಯಂತ್ರಕ ಮಾತ್ರೆಗಳನ್ನು ನುಂಗುತ್ತಾಹೋದರೆ, ಉತ್ಪತ್ತಿಯಾದ ಗುರುಕಫವು ಬೇಡದಿದ್ದರೂ ಒತ್ತಾಯದಿಂದ ಹೀರಿಕೊಳ್ಳುವಂತೆ ಮಾಡುತ್ತದೆ. ಆದರೆ ರಕ್ತ ಅದನ್ನು ಹೀರಿಕೊಂಡದ್ದಷ್ಟೇ ಮುಂದೆ ತಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಪಚನಕ್ಕೆ ಮತ್ತು ಚಲನೆಗೆ ಭಾರವಾಗಿರುವ ಕಫವನ್ನು ಜೀರ್ಣಕ್ರಿಯೆಯ ಮಧ್ಯದಲ್ಲೇ ಉಳಿಸಿಕೊಳ್ಳುತ್ತದೆ.

🎗 ರೋಗ ಉತ್ಪತ್ತಿ ಹೇಗೆ?
ಮರಳಿ ಕರುಳಿಗೆ ತಂದು ಸುರಿಯಲು- ವಿಕೃತ ವಾತ ಅಥವಾ ನಾವು ಸೇವಿಸಿದ ಮಾತ್ರೆ ಅವಕಾಶ ನೀಡುವುದಿಲ್ಲ. ಹಾಗಾಗಿ ಈ ಹಂತದಲ್ಲಿ ಆಗುವ ಬದಲಾವಣೆಯೇ ನೆಗಡಿ ಅಥವಾ ಕೆಮ್ಮು ಅಥವಾ ಅಸ್ತಮಾಗಳಿಗೆ ಕಾರಣ.

🎗 ಏನು ಬದಲಾವಣೆಯಾಗುತ್ತದೆ?
ಅನಗತ್ಯ ರಾಸಾಯನಿಕಗಳು ಶರೀರದಿಂದ ಹೊರಹೋಗುವ ದೊಡ್ಡ ಮಾರ್ಗ ಎಂದರೆ ಗುದದ್ವಾರ, ಇಲ್ಲಿ ಅದನ್ನು ನಿರ್ದಾಕ್ಷಿಣ್ಯವಾಗಿ ಮಾತ್ರೆಗಳು ಅಥವಾ ವಾತ ತಡೆದು ನಿಲ್ಲಿಸಿದೆ.
ಹಾಗಾಗಿ, ಸಣ್ಣ ಮಾರ್ಗವಾದ ಮೂತ್ರ, ಬೆವರು, ಕಫದ ಮೂಲಕ ಅಸಂಪೂರ್ಣ ಜೀರ್ಣಕ್ರಿಯೆಯಲ್ಲಿರುವ ಮಲಕಫವು ಹೊರಹೋಗಬೇಕಾಗುತ್ತದೆ.

🔺ಈ ಕಾರಣದಿಂದ ನಮಗೆ ಮೂತ್ರನಾಳದ ಉರಿಯೋ, ಚರ್ಮದ ಅಲರ್ಜಿಯೋ, ನೆಗಡಿಯೋ ಕಾಣಿಸಿಕೊಳ್ಳುತ್ತದೆ.

🔺ಈಗ ಹೇಳಿ, ನೆಗಡಿಯ ಶಾಶ್ವತ ನಿವಾರಣೆಗೆ ಎಲ್ಲಿ ಚಿಕಿತ್ಸೆ ಆರಂಭಿಸಬೇಕು?

🎗 ನೆಗಡಿಯೊಂದಿಗೆ ನಿಮ್ಮ ಮಕ್ಕಳಿಗೆ ಉದರದ ತೊಂದರೆಗಳಾದ-
• ಚನ್ನಾಗಿ ತಿನ್ನುವ ಬದಲು ಉಬ್ಬಳಿಸಿಕೊಳ್ಳುತ್ತಾರೆ.
• ಹೊಟ್ಟೆ ಉಬ್ಬರಿಸಿರುತ್ತದೆ.
• ಮಲಬದ್ಧತೆ ಇರುತ್ತದೆ.
• ಆಗಾಗ ದ್ರವಮಲ ಪ್ರವೃತ್ತಿಯಾಗುತ್ತದೆ.
• ಒಮ್ಮೊಮ್ಮೆ ವಿಪರೀತ ಹಸಿವಿನಿಂದ ಸಂಕಟಪಡುತ್ತಾರೆ.

ಹೌದು ಎಂದಾದರೆ ಪರಿಹಾರಕ್ಕೆ ಮುಂದಾಗಿ- ಹಿಸ್ಟಮಿನ್ ನಿಯಂತ್ರಕ ಬಳಸಬಾರದೆಂದಲ್ಲ, ಕೇವಲ ನೂರಕ್ಕೆ 1-2% ಮಕ್ಕಳಿಗೆ ಅದೂ ತುರ್ತು ಪರಿಸ್ಥಿತಿಯಲ್ಲಿ ಬಳಸಬಹುದು.

ಸಂಪೂರ್ಣ ಗುಣವಾಗಲು-
ಏನು ಆಹಾರ?
ಏನು ವಿಹಾರ?
ಅಸ್ತಮಾ ಬರದಂತೆ ಹೇಗೆ ತಡೆಯಬಹುದು?
ಅಸ್ತಮಾ ಬಂದರೆ ಏನು?
ಪುಪ್ಫುಸಕ್ಕೆ ಹೊಡೆದುಕೊಳ್ಳುವ ಸ್ಟಿರಾಯ್ಡ್ ಪಂಪ್ ಗಳು ಸುರಕ್ಷಿತವೇ?

📮 ಈ ಎಲ್ಲವನ್ನೂ ನಾಳಿನ‌ ಸಂಚಿಕೆಯಲ್ಲಿ ನೋಡೋಣ.

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
🦋🦋
••••


ಸಂಪರ್ಕಿಸಿ:
📞
9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

Admin

Leave a Reply

Your email address will not be published. Required fields are marked *

error: Content is protected !!