ಮಕ್ಕಳ ಬೆಳವಣಿಗೆಯಲ್ಲಿ ತೈಲಾಭ್ಯಂಗದ ಪಾತ್ರ ಭಾಗ-4
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ: ಮಕ್ಕಳ ಬೆಳವಣಿಗೆಯಲ್ಲಿ ತೈಲಾಭ್ಯಂಗದ ಪಾತ್ರ
ಭಾಗ-4
•••••••••••••••••••••••••••••••••••
ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ ಬೆಳವಣಿಗೆಗೆ “ನಿತ್ಯ ತೈಲಾಭ್ಯಂಗ” ಬಹು ಮುಖ್ಯ.
•••••••••••••••••••••••••••••••••
ಜನಿಸಿದ ಮಕ್ಕಳಿಗೆ ತೈಲಾಭ್ಯಂಗ ಮಾಡಿಸಿ ನಿತ್ಯವೂ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸುವ ರೂಢಿ, ಇಡೀ ಭಾರತದಲ್ಲಿ ಎಲ್ಲಾ ಭಾಗದಲ್ಲಿಯೂ ಇದೆ.
ಮತ್ತು
ಈ ರೂಢಿಯು ಸಾವಿರ ಸಾವಿರ ವರ್ಷಗಳಿಂದಲೂ ಪ್ರಚಲಿತದಲ್ಲಿದೆ. ಅದರಿಂದ ಮನುಕುಲ ಆರೋಗ್ಯದಿಂದಲೂ ಇದೆ.
ಈ ತೈಲಾಭ್ಯಂಗದ ಬಗ್ಗೆ ಸಂಶೋಧನೆಗಳನ್ನು ಮಾಡಿ ಅದರ ಪ್ರಯೋಜನವನ್ನು ಇಡೀ ಪ್ರಪಂಚದ ಮನುಕುಲ ಮಾಡಿಕೊಳ್ಳಬಹುದಿತ್ತು.
ದುರದೃಷ್ಟವಶಾತ್ ಅಂಬೆಗಾಲಿಡುತ್ತಿರುವ ವಿಜ್ಞಾನವನ್ನು ನಂಬಿ ಬಹುತೇಕ ವೈದ್ಯರು ಹೆರಿಗೆಯ ನಂತರ ಶಿಶುಗಳಿಗೆ ತೈಲಾಂಭ್ಯಂಗ ಮಾಡಿಸಬಾರದೆಂಬ ಕಟ್ಟಪ್ಪಣೆಯನ್ನು ಹೊರಡಿಸಿದ್ದಾರೆ.
ವಾಸ್ತವದಲ್ಲಿ ಮೆದುಳಿನಿಂದ ಹೊರಟ ನರತಂತುಗಳೆಲ್ಲವೂ ಕೊನೆಗೊಳ್ಳುವುದು ಚರ್ಮದ ಐದನೆಯ ಪದರವಾದ “ವೇದಿನಿ” ಹೆಸರಿನ ಚರ್ಮದ ಪದರಿನಲ್ಲಿ.
“ವೇದಿನಿ ತ್ವಚೆ”ಯು ಶರೀರದ ಆಂತರಿಕ ಮತ್ತು ಬಾಹ್ಯ ಪ್ರಪಂಚದ ಪ್ರಕೃತಿಯನ್ನು ಪರಸ್ಪರ ಸಮ್ಮಿಳಿತಗೊಳಿಸಿ ಎರಡೂ ಪ್ರಕೃತಿಗಳು ಪೂರಕವಾಗಿ ಹೊಂದಿಸುವಂತೆ ಮಾಡುವ ಅತ್ಯದ್ಭುತ ಅವಯವ. ಇದರಲ್ಲಿ ಬಹುಸೂಕ್ಷ್ಮ “ಸಂವೇದನೆ”ಯುಳ್ಳ ನರತಂತುಗಳು ಇದ್ದು ಇವು ಬಾಹ್ಯ ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಸುದೂರದಿಂದಲೇ ಗ್ರಹಿಸಿ ಅದಕ್ಕೆ ಹೊಂದಿಕೊಳ್ಳುವಂತೆ ಅಥವಾ ಅದರಿಂದ ರಕ್ಷಣೆ ಪಡೆಯುವಂತೆ ಈ ಶರೀರದ ಆಂತರಿಕ ಪ್ರಕೃತಿಗೆ ಸಂದೇಶವನ್ನು ರವಾನಿಸಿ ಪರಸ್ಪರ ಸಮತೋಲನಗೊಳಿಸುತ್ತದೆ. ಅದಕ್ಕಾಗಿಯೇ ಇದನ್ನು “ವೇದಿನಿ ತ್ವಚೆ” ಎನ್ನುತ್ತಾರೆ.
ತನ್ನ ಸೂಕ್ಷ್ಮ ಸಂವೇದನೆಯ ಬದಲಿಗೆ ಮಾನವ ಯಂತ್ರಗಳ ಮೇಲೆ ಅವಲಂಬಿತನಾಗಿರುವುದರಿಂದ ಬಾಹ್ಯ ಪ್ರಕೃತಿಯ ಎಲ್ಲಾ ಆಘಾತ ಅವಗಡಗಳನ್ನು ಯಂತ್ರಗಳಿಂದಲೇ ಅಳೆಯ ಹೊರಟು ಅವನು “ಕುಬ್ಜ ಸಂವೇದಿ”ಯಾಗಿದ್ದಾನೆ ಮತ್ತು ಅದರ ಆಧಾರದಲ್ಲಿಯೇ ಸಂಶೋಧನೆಗಳನ್ನು ನಡೆಸಿ ಅದನ್ನೇ ಬಹುದೊಡ್ಡ ಸಂಶೋಧನೆ ಅಥವಾ ಸಾಧನೆ ಎಂದು ಪ್ರಸ್ತುತ ಪಡಿಸುತ್ತಿದ್ದಾರೆ. ತತ್ಪರಿಣಾಮ ಪ್ರಪಂಚದ ಬಹುತೇಕ ಜನರು ಈ ಸಂಶೋಧನೆಯ ಪುಟ್ಟ ಲಾಭಕ್ಕಾಗಿ ಬಹುದೊಡ್ಡ ಲಾಭಕೊಡುವ ತೈಲಾಭ್ಯಂಜನವನ್ನು ಮೂಲೆಗೆ ತಳ್ಳುತ್ತಿದ್ದಾರೆ.
ಸಂವೇದನೆ ಎಂಬುದು ಜೀವಿಗಳಿಗೆ ಬಹು ಪ್ರಯೋಜನಕಾರಿ, ಎಂಬುದು ಆಧುನಿಕ ಜಗದ ಜನರಿಗೆ ಅರ್ಥವಾದ ದಿನ ಸನಾತನ ಭಾರತೀಯ ಆಚರಣೆಗಳ ಹಿಂದಿನ ಶ್ರೇಷ್ಠ ಫಲಕಾರಿ ಉದ್ದೇಶ ಅರ್ಥವಾಗುತ್ತದೆ.
➡️ ಮಕ್ಕಳ ತೈಲಾಭ್ಯಂಜನ ಹೇಗೆ ಪ್ರಯೋಜನಕಾರಿ ಎಂಬುದನ್ನು ನಾಳೆ ನೋಡೋಣ…..
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
🌼🍃🌼
ಹಾಗೆಯೇ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌼🍃🌼
ಧನ್ಯವಾದಗಳು🙏
•••••••••••••••••••••••
ಮಕ್ಕಳ ಸರ್ವಾಂಗೀಣ ಬೆಳಣಿಗೆಗೆ ಮತ್ತು ಅವರ ರೋಗನಿರೋಧಕ ಶಕ್ತಿಗಾಗಿ-
“ಗರ್ಭಿಣಿ ಸ್ವರ್ಣಯೋಜನೆ” ಹಾಗೂ
“ಮಕ್ಕಳ ಸ್ವರ್ಣಬಿಂದು ಯೋಜನೆ”
‘ಮಕ್ಕಳಿಗೆ ಮೃದು ತೈಲದಿಂದ ಅಭ್ಯಂಜನ ಮಾಡಿಕೊಳ್ಳುವ” ರೂಢಿಯನ್ನು ಅಳವಡಿಸಿಕೊಳ್ಳಿ.
ಸಂಪರ್ಕಿಸಿ:
📞
9148702645
9606616165
ವಿಶ್ವಹೃದಯಾಶೀರ್ವಾದವಂ ಬಯಸಿ
–ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).