ಮೂತ್ರಪಿಂಡಗಳ ವೈಫಲ್ಯದ ಆರಂಭಿಕ ಲಕ್ಷಣಗಳು…!

ಮೂತ್ರಪಿಂಡಗಳ ವೈಫಲ್ಯದ ಆರಂಭಿಕ ಲಕ್ಷಣಗಳು…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಮೂತ್ರಪಿಂಡಗಳ ವೈಫಲ್ಯದ ಆರಂಭಿಕ ಲಕ್ಷಣಗಳು…!

   ★ಮೂತ್ರಸ್ಯ "ಕ್ಲೇದ" ವಾಹನಂ|
        ಸ್ವೇದಸ್ಯ "ಕ್ಲೇದ" ವಿಧ್ರುಧಿಃ ||

√ ಕ್ಲೇದ = ದ್ರವರೂಪದಲ್ಲಿರುವ ಮಲ (waste in the form of liquid)
√ ಸಂಕ್ಲೇದ = ದೊಡ್ಡ ಗಾತ್ರದ ಕಣಗಳನ್ನು ಹೊಂದಿರುವ ದ್ರವರೂಪದಲ್ಲಿರುವ ಮಲ.
ಈ ದ್ರವ ರೂಪದ ಮಲವು ಮೂತ್ರದೊಂದಿಗೆ ಹರಿದು ಹೊರಹೋಗುತ್ತದೆ ಮತ್ತು ಬೆವರಿನೊಂದಿಗೆ ತೂರಿ ಹೊರಬರುತ್ತದೆ.

ಆಹಾರದಿಂದ ಬೇರ್ಪಟ್ಟ ಮಲವು ಸರಿಯಾಗಿ ವಿಭಜನೆಯಾಗದೇ ಇದ್ದಲ್ಲಿ ಮಲಬದ್ಧತೆ ಉಂಟಾಗಬಹುದು ಅಥವಾ ದುರ್ವಾಸನೆಯಿಂದ ಕೂಡಿದ ಮಲ ಪ್ರವೃತ್ತಿಯಾಗಬಹುದು.

ಅದೇರೀತಿ,
ದ್ರವರೂಪದ ಮಲವಾದ ಕ್ಲೇದದ ಬದಲು ಸರಿಯಾಗಿ ಉತ್ಪತ್ತಿಯಾಗದ ಮತ್ತು ದೊಡ್ಡ ಕಣಗಳುಳ್ಳ “ಸಂಕ್ಲೇದವು” ಮೂತ್ರದ ಅಥವಾ ಬೆವರಿನ ಮುಖಾಂತರ ಹೊರಹೋಗುತ್ತಿದ್ದರೆ ಈ ಕೆಳಗಿನ ಆರಂಭಿಕ ಲಕ್ಷಣಗಳು ಉಂಟಾಗುತ್ತವೆ.
(ಈ ಲಕ್ಷಣಗಳನ್ನು ಉಪೇಕ್ಷಿಸಿದರೆ ಮುಂದಿನ 5-10 ವರ್ಷಗಳಲ್ಲಿ ಮೂತ್ರಪಿಂಡಗಳಲ್ಲಿ ವಿಕೃತಿ ಕಾಣಲು ಆರಂಭಿಸುತ್ತದೆ.)

⤵️
● ದುರ್ವಾಸನೆಯುಕ್ತ ಬೆವರು.
● ಅತಿಯಾದ ತಲೆಯ ಹೊಟ್ಟು.
● ಕಂಕುಳುಗಳಲ್ಲಿ ಬೆವರು ಉಪ್ಪಿನಂತೆ ಹರಳುಗಟ್ಟುವುದು.
● ದ್ರವ ಜಿನುಗಿಸುವ ಚರ್ಮದ ಕಾಯಿಲೆಗಳು (ವಿಶೇಷವಾಗಿ ಪಾದ , ಕಾಲುಗಳಲ್ಲಿ).
● ವಿಪರೀತ ಚರ್ಮದ ಅಲರ್ಜಿ.
● ಶರೀರದಲ್ಲಿ ಬಿಲ್ಲೆಯಾಕಾರದಲ್ಲಿ ಕೂದಲು ಉದುರುವುದು.

⤵️
● ದುರ್ವಾಸನೆಯಿಂದ ಕೂಡಿದ ಮೂತ್ರ.
● ಸಿಹಿ ಅಥವಾ ಹುಳಿ ವಾಸನೆಯುಳ್ಳ ಮೂತ್ರ.
● ನಿರಂತರ ಗಡಸು ಹಳದಿ ವರ್ಣದ ಮೂತ್ರ.
● ಅತ್ಯಂತ ನೊರೆಯಿಂದ ಕೂಡಿದ ಮತ್ತು ಆ ನೊರೆ ಬೇಗ ಒಡೆಯದೆ ಪ್ರವಹಿಸುವ ಮೂತ್ರ.
● ಸೋಪಿನಂತೆ ಜಾರುವ ಮೂತ್ರ.
● ಮಧುಮೇಹ ಇಲ್ಲದಿದ್ದರೂ, ಬೇಸಿಗೆಯನ್ನೂ ಲೆಕ್ಕಿಸದೇ ಪದೇ ಪದೇ ಮೂತ್ರ ಪ್ರವೃತ್ತಿಯಾಗುವುದು.
● ದೂರ ಪ್ರಯಾಣದಲ್ಲಿ ಪಾದಗಳ ಬಿಗಿತ ಅಥವಾ ಸಣ್ಣದಾಗಿ ಊತ ಬರುವುದು.
● ಮಳೆ, ಚಳಿ ಎನ್ನದೇ ನಿರಂತರ ಬಾಯಾರಿಕೆಯಾಗುವುದು.
● ಪದೇ ಪದೇ ಮೂತ್ರನಾಳದ ಸೋಂಕು ಉಂಟಾಗುವುದು.

⤵️
● ಆಲಸ್ಯ , ಜಡತ್ವದಿಂದುರವುದು.
● ಆಳವಾದ ನಿದ್ದೆ ಬಾರದಿರುವುದು.
● ಹಸಿವಾಗದಿರುವುದು, ಹಸಿವಾದರೆ ತಡೆಯಲು ಸಾಧ್ಯವೇ ಇರದಂತೆ ನಿಶ್ಯಕ್ತಿ ಹೊಂದುವುದು.
● ಸ್ವರದ ಬಲ ಸ್ವಲ್ಪಮಟ್ಟಿಗೆ ಕುಗ್ಗುವುದು.
● ದೀರ್ಘ ಕಾಲದ ರಕ್ತ ಹೀನತೆ ಉಂಟಾಗುವುದು.
● ಬೆಳಗ್ಗೆ ಎದ್ದಾಗ ಕಣ್ಣಿನ ಸುತ್ತ ತೆಳುವಾದ ಊತವಿರುವುದು.
● ಮಾಂಸಖಂಡಗಳ ಬಲ ಸ್ವಲ್ಪಮಟ್ಟಿಗೆ ಕುಗ್ಗುವುದು ಅಥವಾ ಮೊದಲಿನ ಧೃಢತೆ ಇಲ್ಲದಿರುವುದು.

ಈ ಮೇಲಿನ ಲಕ್ಷಣಗಳನ್ನು ಓದಿ ಇಂದೇ ಕಿಡ್ನಿವೈಫಲ್ಯವಾಗಿದೆಯೆಂದು ಭಾವಿಸಿ ಗಾಬರಿಪಡುವುದು ನಿರರ್ಥಕ.
ಏಕೆಂದರೆ ಇವೆಲ್ಲಾ ಆರಂಭಿಕ ಸೂಚನೆಗಳಷ್ಟೇ, ಕಾಲ ಗತಿಸಿದಂತೆ , ವಿಧಿ ಸೆಳೆದಂತೆ, ಕೊಂಚ ಆಹಾರ ಮತ್ತು ಜೀವನಶೈಲಿ , ಜೀವನ ಸ್ಥಳ ಬದಲಾವಣೆಯಾಗಿಬಿಟ್ಟರೆ ಈ ಎಲ್ಲಾ ಲಕ್ಷಣಗಳು ಮಾಯವಾಗುತ್ತವೆ.
(ಉದಾಹರಣೆಗೆ: ಈ ಲಕ್ಷಣಗಳಿರುವ ವ್ಯಕ್ತಿ ಯಾವುದೋ ಕಾರಣಕ್ಕೆ ಸಮುದ್ರದ ತೀರದ ಅಥವಾ ಹಿಮಾಲಯ ತಪ್ಪಲಿನ ನಗರ ಗ್ರಾಮಗಳಲ್ಲಿ ಜೀವನ ಮಾಡಬೇಕಾಗಿ ಬಂದರೆ ಅವನ ಆರೋಗ್ಯ ಸುಧಾರಿಸಿ ಕಿಡ್ನಿ ವೈಫಲ್ಯದಿಂದ ಪಾರಾಗಿಬಿಡುತ್ತಾನೆ).

🔜ಸರಳ ಪರಿಹಾರಗಳನ್ನು ನಾಳಿನ ಸಂಚಿಕೆಯಲ್ಲಿ ನೋಡೋಣ…..

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!