ಕೊರೊನಾ ಸೋಂಕಿನ ಅವಸ್ಥೆಯಲ್ಲಿ ಪಾಲಿಸಬೇಕಾದ ದಿನಚರಿ…!

ಕೊರೊನಾ ಸೋಂಕಿನ ಅವಸ್ಥೆಯಲ್ಲಿ ಪಾಲಿಸಬೇಕಾದ ದಿನಚರಿ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ಕೊರೊನಾ ಸೋಂಕಿನ ಅವಸ್ಥೆಯಲ್ಲಿ ಪಾಲಿಸಬೇಕಾದ ದಿನಚರಿ.

🕕ಬೆಳಗ್ಗೆ 6
🔹ಹಾಸಿಗೆಯಿಂದ ಎದ್ದುಬಿಡಿ
ಸಹಜವಾಗಿ ಮಲಪ್ರವೃತ್ತಿ ಆಗಬೇಕು, ಅಗದಿದ್ದಲ್ಲಿ ಒತ್ತಡ ಹಾಕುವುದು ಬೇಡ . ಅದರ ಬದಲು ರಾತ್ರಿಯ ಆಹಾರದ ಕಡೆಗೆ ಮತ್ತು ನಿದ್ದೆಯ ಕಡೆಗೆ ಗಮನ ಕೊಡುವುದು ಸೂಕ್ತ.

🕖ಬೆಳಗ್ಗೆ 7-🕢7:30
🔹ಬಿಸಿ ನೀರಿನ ಸ್ನಾನ (ಸ್ನಾನದ ಕೊಣೆಯಲ್ಲಿ ಬಹಳ ಸಮಯ ಕಳೆಯಬಾರದು, ತಣ್ಣೀರನ್ನು ಬಳಸಬಾರದು).

🔹ಕಷಾಯ ಸೇವನೆ:
ಆಯುರ್ವೇದಿಯ ಕಷಾಯಗಳನ್ನು ಸ್ವಲ್ಪ ಬೆಲ್ಲ ಬೆರೆಸಿ ಸೇವಿಸಿ, ಸುಲಭವಾಗಿ ದೊರೆಯುತ್ತಿದ್ದಲ್ಲಿ ಆರು ಇಂಚು ಉದ್ದದಷ್ಟು ಅಮೃತಬಳ್ಳಿಯ ಕಾಂಡವನ್ನು ಕಚ್ಚಿ ತಿನ್ನಿರಿ.
🔹ನಿತ್ಯ ರೂಢಿಯಲ್ಲಿರುವ ಚಹಾ ಕಾಫಿಗಳು ನಿಷಿದ್ಧ. ಏಕೆಂದರೆ, ಉತ್ತೇಜಕ ಗುಣವನ್ನು ಹೊಂದಿರುವ ಈ ಪಾನೀಯಗಳು ಶರೀರದ ಬುನಾದಿಯಾಗಿರುವ (stem cells) ಮಜ್ಜಾ(bone marrow)ದಿಂದ ಶಕ್ತಿಯನ್ನು ಹೀರಿ ಒಣಗಿಸುತ್ತಿರುತ್ತವೆ. ಇದರಿಂದ ರೋಗನಿರೋಧಕ ಶಕ್ತಿ ಅವಧಿ ಪೂರ್ವದಲ್ಲೇ ಕ್ಷೀಣಿಸುತ್ತದೆ.

🕗ಬೆಳಗ್ಗೆ 8-🕣8:30
🔹ಪಚನಕ್ಕೆ ಹಗುರವಾದ ಸಾಕಷ್ಟು ನೀರಿನಲ್ಲಿ ಬೆಂದಿರುವ ಮೃದುವಾದ ಆಹಾರವನ್ನು ಬಳಸಿ. ಗೋಧಿ, ಮೈದಾ, ಎಣ್ಣೆ ಪದಾರ್ಥಗಳು ಶರೀರದ ಜಲಾಂಶವನ್ನು ಹೀರಿ ಸೋಂಕಿಗೆ ದಾರಿ ಮಾಡಿಕೊಡುತ್ತವೆ.

🕣ಬೆಳಗ್ಗೆ 8:30 ರಿಂದ 🕐 ಮಧ್ಯಾಹ್ನ 1:
🔹ಜ್ವರ, ಆಯಾಸ ಇಲ್ಲದವರು ನಿಯಮಿತವಾಗಿ ಕೆಲಸಗಳನ್ನು ಮಾಡುತ್ತಿರಿ, ಅತಿ ಸಾಹಸ ಎಂದಿಗೂ ಬೇಡ, ಹಾಗೆಯೇ ಹಗಲು ನಿದ್ದೆಯೂ ಬೇಡ.

🔹ಜ್ವರ ಇರುವವರು ಮತ್ತೆ ಬೇಕಾದಲ್ಲಿ ಅಮೃತಬಳ್ಳಿಯ ಕಾಂಡವನ್ನು ತಿನ್ನಬಹುದು ಮತ್ತು ಸಾಕಷ್ಟು ವಿಶ್ರಾಂತಿಯನ್ನು ಪಡೆಯಿರಿ. ಅನಿವಾರ್ಯವಾಗಿ ನಿದ್ರೆಬಂದರೆ ಮಾತ್ರ ನಿದ್ರಿಸಿ.

🕐ಮದ್ಯಾಹ್ನ 1 ರಿಂದ 🕜 1:30
🔹ಮೃದುವಾದ ಹಳೆಯ ಅಕ್ಕಿಯಿಂದ ತಯಾರಿಸಿದ ತಾಜಾ ಅನ್ನ ಮತ್ತು ತರಕಾರಿ ಪ್ರಧಾನವಾದ ಸಾಂಬಾರ್ ಅನ್ನು ಬಳಸಿ. ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿಯನ್ನು ಮತ್ತೆ ಸೇವಿಸುವುದು ಬೇಡ.

🔹ಸಂಜೆ 5:30 ರ ವರೆಗೆ ಶ್ರಮದಾಯಕವಲ್ಲದ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿರಿ ಮತ್ತು ಕುಟುಂಬದ ಸದಸ್ಯರೊಂದಿಗೆ, ಮನಸ್ಸಿಗೆ ಮುದ ಕೊಡುವ ಮಕ್ಕಳೊಂದಿಗೆ, ಆಪ್ತರೊಂದಿಗೆ ಲೋಕಾಭಿರಾಮವಾಗಿ ಚರ್ಚೆಯಲ್ಲಿ ತೊಡಗಿ, ಒಳಾಂಗಣ ಆಟಗಳನ್ನು ಆಡಿ(ಚೆಸ್ ಆಟ ಬೇಡ).
ಒಟ್ಟಾರೆ ಸಂತೋಷದಿಂದ ಇರಿ.
ಅಗತ್ಯವಿರುವವರು, ಜ್ವರ ಬಂದವರು ಮಾತ್ರ ವಿಶ್ರಾಂತಿ ಪಡೆಯಬಹುದು.

🕔ಸಂಜೆ 5 ರಿಂದ 🕠 5:30
🔹ಮತ್ತೊಮ್ಮೆ ಆಯುರ್ವೇದಿಯ ಕಷಾಯವನ್ನು ಸೇವಿಸಿ.

🕖ರಾತ್ರಿ 7 ರಿಂದ 🕢 7:30
🔹ಆಗತಾನೇ ತಯಾರಿಸಿದ ಯಥೇಚ್ಛ ದ್ರವಾಂಶವುಳ್ಳ ಆಹಾರವನ್ನು ಅರ್ಧ ಹೊಟ್ಟೆಯಷ್ಟು ಮಾತ್ರ ಸೇವಿಸಿ.(ಇದು ಆರೋಗ್ಯದ ಬಹು ದೊಡ್ಡ ಹಂತ)
🔹ರಾತ್ರಿ ಆಹಾರ ಸೇವನೆಯ ನಂತರ ಸುಮಾರು ಒಂದುವರೆ ಗಂಟೆಗಳ ಕಾಲ ಯಾವುದೇ ಕೆಲಸವನ್ನಾಗಲೀ, ನಡೆಯುವುದನ್ನಾಗಲೀ ಮಾಡಬಾರದು.

ಸಂಗ್ರಹ ಚಿತ್ರ

🕘9 ಗಂಟೆಯ ನಂತರ 50 ಮೀಟರ್ ನಷ್ಟು 🚶ದೂರ ಹೆಜ್ಜೆ ಹಾಕಿ ಬಂದು ಮೂತ್ರವನ್ನು ವಿಸರ್ಜಿಸಿ, ಮನೋ ಅನುಕೂಲಕರ ಸ್ಥಳದಲ್ಲಿ ನಿದ್ರಿಸಿ (ಹೀಗೆ ಮಾಡುವುದರಿಂದ ಮರುದಿನ ಮಲಬದ್ಧತೆ ಇರುವುದಿಲ್ಲ).

ಅಗತ್ಯ ಎನಿಸಿದಲ್ಲಿ, ಹಸಿವು ಎನಿಸಿದಲ್ಲಿ ಮಧ್ಯದಲ್ಲಿ ಯಾವಾಗಲೋ ಒಮ್ಮೆ ಸ್ವಲ್ಪ ಭಾಗ ಹಣ್ಣುಗಳನ್ನು ಸೇವಿಸಬಹುದು (ಬಾಳೆಹಣ್ಣು, ಕಲ್ಲಂಗಡಿ ಹಣ್ಣು ಬೇಡ). ಯಾವುದೇ ಹಣ್ಣನ್ನು ಜ್ಯೂಸ್ ಮಾಡಿ ಕುಡಿಯುವುದು ಬೇಡ.

⏩ಈ ನಿಯಮಗಳನ್ನು ಕನಿಷ್ಠ 7 ದಿನ ಗರಿಷ್ಠ 21 ದಿನಗಳವರೆಗೆ ಪಾಲಿಸಿದಲ್ಲಿ ವೈರಾಣು ಸೋಂಕಿನಿದಾಗಬಹುದಾದ ಯಾವುದೇ ಅಪಾಯಕಾರಿ ದುಷ್ಪರಿಣಾಮ ಆಗುವುದಿಲ್ಲ. ರೋಗಿಯು ನಿರಾಯಾಸವಾಗಿ ಗುಣಮುಖನಾಗುತ್ತಾನೆ.

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!