ನನ್ನ ಭಾರತ ಶ್ರೇಷ್ಠ ಭಾರತ: ಅಧ್ಯಾಯ 04 : ಸಾಹಿತ್ಯ…!

ನನ್ನ ಭಾರತ ಶ್ರೇಷ್ಠ ಭಾರತ: ಅಧ್ಯಾಯ 04 : ಸಾಹಿತ್ಯ…!

ಸೂಕ್ಷ್ಮ ಮತ್ತು ಆಳವಾದ ಜ್ಞಾನದ ಶೋಧನೆಯಿಂದ ವೇದದ ರೂಪದಲ್ಲಿ ಭಾರತದ ಪುರಾತನ ಪದ್ದತಿಗಳು ರೂಪುಗೊಂಡಿವೆ
ಈ ಬ್ರಹ್ಮಾಂಡದ ಸೃಷ್ಟಿಯನ್ನು ನಿಯಂತ್ರಿಸುವ ಸಾರ್ವತ್ರಿಕ ಕಾನೂನುಗಳನ್ನು ವೈದಿಕ ದಾರ್ಶನಿಕರು ಕಂಡುಕೊಂಡರು.

ವೇದ ಸಾಹಿತ್ಯ ಎಂದರೆ 4 ವೇದಗಳು (ಋಗ್, ಯಜುರ್, ಸಾಮ, ಅಥರ್ವ), 6 ವೇದಾಂಗಗಳು (ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಮತ್ತು ಕಲ್ಪ), 4 ಉಪವೇದಗಳು (ಆಯುರ್ವೇದ, ಧನುರ್ವೇದ, ಗಂಧರ್ವವೇದ, ಸತ್ಯಪಥವೇದ), 4 ಉಪಾಂಗಗಳು (ಮೀಮಾಂಸೆ, ನ್ಯಾಯ, ಪುರಾಣಗಳು, ಧರ್ಮಶಾಸ್ತ್ರ) ಈ ರೀತಿಯ 18 ಅಂಗಗಳಾಗಿ ವಿಭಜಿಸಲಾಗಿದೆ. ಜಾತ್ಯಾತೀತ ಪ್ರಜ್ಞೆ, ನೈತಿಕ ಮತ್ತು ತಾತ್ವಿಕ ಅಂಶಗಳು ಇವುಗಳಲ್ಲಿ ಅಡಕವಾಗಿವೆ.

ರಾಮಾಯಣ ಮತ್ತು ಮಹಾಭಾರತ ಎಂಬ 2 ಮಹಾಕಾವ್ಯಗಳು ಜಗತ್ತಿನಾದ್ಯಂತ ಹಿಂದಿನಿಂದ ಇಂದಿನವರೆಗೂ ಗುರುತರವಾದ ಪಾತ್ರವನ್ನು ವಹಿಸಿದೆ. ವಿಶೇಷ ಸಂಗತಿಯೆಂದರೆ ಮಹಾಭಾರತವನ್ನು 1 ಲಕ್ಷ ಪದ್ಯಗಳೊಂದಿಗೆ ವಿಶ್ವದ ಅತಿದೊಡ್ಡ ಮಹಾಕಾವ್ಯವೆಂದು ಪರಿಗಣಿಸಲಾಗಿದೆ.

7,8 ನೇ ಶತಮಾನದಲ್ಲಿ ಪ್ರಸಿದ್ಧ ಪರ್ಷಿಯನ್ ವಿದ್ವಾಂಸ ಇಬ್ನ್ ಇ ಮುಕಾಫಾ ಇವರು ಭಾರತದ ಪ್ರಸಿದ್ಧ ಕಥಾ ಪುಸ್ತಕವಾದ ಪಂಚತಂತ್ರ ಕಥೆಗಳನ್ನು ಅರೇಬಿಕ್ ಭಾಷೆಗೆ ಅನುವಾದಿಸಿದ್ದಾರೆ.

ವಿಶೇಷವೇನೆಂದರೆ ಇದು ಅರೇಬಿಕ್ ಸಾಹಿತ್ಯದ ಪ್ರಸಿದ್ಧ ಪುಸ್ತಕಗಳಲ್ಲಿ ಒಂದಾಗಿರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ. ಇದಷ್ಟೇ ಅಲ್ಲದೇ ಪ್ರಪಂಚದಾದ್ಯಂತ 21 ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿದೆ.

ಪ್ರಸಿದ್ಧ ಕವಿ ಕಾಳಿದಾಸನು ಷೇಕ್ಸ್‌ಪಿಯರ್ ಗಿಂತ ಕನಿಷ್ಟ ಒಂದು ಸಾವಿರ ವರ್ಷಗಳ ಮೊದಲು ವಿಶ್ವದ ಶ್ರೇಷ್ಠ ಕವಿ ಮತ್ತು ನಾಟಕಕಾರ ಎಂದೆನಿಸಿಕೊಂಡಿದ್ದಾರೆ. ಇವರ ಅನೇಕ ಕೃತಿಗಳು ಇಂಗ್ಲೀಷ್ ಮತ್ತು ಅಂತರರಾಷ್ಟ್ರೀಯ ಭಾಷೆಗಳಿಗೆ ಅನುವಾದವಾಗಿವೆ.

ಪ್ರಪಂಚದ ಉತ್ತಮ ಶೃಂಗಾರ ರಸದ ಸಾಹಿತ್ಯದಲ್ಲಿ ‘ಅಭಿಜ್ಞಾನ ಶಾಕುಂತಲಂ’ ನಾಟಕವು ಒಂದು ಸ್ಥಾನವನ್ನು ಪಡೆದುಕೊಂಡಿದೆ.

ಬಾಣಭಟ್ಟ, ಭಾಸ, ಜಯದೇವ, ಅಶ್ವಘೋಷ ಮುಂತಾದವರು ಭಾರತೀಯ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.

ವಿವಿಧ ಭಾರತೀಯ ಭಾಷೆಗಳಲ್ಲಿ ತಿರುವಳ್ಳುವರ್, ಸರ್ವಜ್ಞ, ಪಂಪ, ಕುಮಾರವ್ಯಾಸ, ಕಬೀರದಾಸರು, ತುಳಸೀದಾಸರು, ಪುರಂದರದಾಸರು, ಕನಕದಾಸರು ಮುಂತಾದ ಅನೇಕ ಬರಹಗಾರರು ಇದ್ದಾರೆ.

ಆಧುನಿಕ ಭಾರತೀಯ ಲೇಖಕರಾದ (ಅಥವಾ ಭಾರತದ ಮೂಲದವರಾದ) ವಿ.ಎಸ್.ನೈಪಾಲ್, ಸಲ್ಮಾನ್ ರಶ್ದಿ, ವಿಕ್ರಮ್ ಸೇಠ್, ಆರ್.ಕೆ. ನಾರಾಯಣ್, ರಸ್ಕಿನ್ ಬಾಂಡ್ ಮುಂತಾದವರುಗಳು ತಮ್ಮ ಬರಹದ ಮೂಲಕ ಅಂತಾರಾಷ್ಟ್ರೀಯ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

  ಸಂಗ್ರಹ : ಶ್ರೀ ಪ್ರಭಂಜನ
             ರಾಜ್ಯ ಸಂಯೋಜಕರು
             ವಿವೇಕ ಶಿಕ್ಷಣ ವಾಹಿನಿ

#ನನ್ನಭಾರತಶ್ರೇಷ್ಠ_ಭಾರತ

Admin

Leave a Reply

Your email address will not be published. Required fields are marked *

error: Content is protected !!