ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-15
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-15
ನಮ್ಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿವರ್ಧಕ ಕಷಾಯದಲ್ಲಿನ 36 ಔಷಧಿ ದ್ರವ್ಯಗಳ ಮಾಹಿತಿಗಾಗಿ ಈ ಲಿಂಕನ್ನು ಒತ್ತಿ.
https://hospitalfreelife.blogspot.com/2020/07/atharva-ayurveda-research-instituteis_31.html
ಸೂಚನೆ:
ಈ 36 ದ್ರವ್ಯಗಳ ಸಂಯೋಜನೆಯ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾಣದಲ್ಲಿ ಯಾರೂ ಬಳಸಬೇಡಿ.
ಕಷಾಯದಲ್ಲಿನ ಘಟಕ ದ್ರವ್ಯ:
13)ವಾಸ(Adathoda vasica):
“ವಾಸ” ಇದೊಂದು ಪುಪ್ಪುಸಕ್ಕೆ ಹರಿಯುವ ರಕ್ತನಾಳಗಳನ್ನು ಬಲಪಡಿಸುವ ದ್ರವ್ಯ.
ಬಹುಶಃ ಇಂದು ಬಹಳಷ್ಟು ಜನರಿಗೆ ಗೊತ್ತಾದ ವಿಷಯವೇನೆಂದರೆ ಸೋಂಕಿತ ವ್ಯಕ್ತಿಯು ಅಪಾಯದ ಹಂತವನ್ನು ತಲುಪುತ್ತಿರುವುದು ಮತ್ತು ಮರಣಿಸುತ್ತಿರುವುದಕ್ಕೆ ಕಾರಣವೇ ಈ ಪುಪ್ಪುಸದ ರಕ್ತನಾಳಗಳ ಕಾರ್ಯನಿರ್ವಹಣೆಯ ವೈಫಲ್ಯದಿಂದ.
ವಾಸ್ತವದಲ್ಲಿ ಪುಪ್ಪುಸದ ರಕ್ತನಾಳಗಳಲ್ಲಿ ವೈರಸ್ ಮತ್ತು ರಕ್ತದೊಂದಿಗಿನ ಹೋರಾಟದ ಫಲರೂಪವಾಗಿ ರಕ್ತ ಹೆಪ್ಪುಗಟ್ಟುವ ಅಥವಾ ಗಟ್ಟಿಯಾಗುವ ಪ್ರಕ್ರಿಯೆ ನಡೆದು ವ್ಯಕ್ತಿಗೆ ಆಮ್ಲಜನಕದ ಕೊರತೆಯು ಕಾಣಿಸಿಕೊಳ್ಳುತ್ತದೆ.
ಈ ವಿಷಮ ಅವಸ್ಥೆಯಲ್ಲಿ ಪರೀಕ್ಷಿಸಿ ಆಮ್ಲಜನಕ ಕಡಿಮೆಯೆಂದು ವೆಂಟಿಲೇಟರ್ ಗೆ ಹಾಕುವುದರಿಂದ ಯಾವುದೇ ಲಾಭವೂ ಇಲ್ಲ. ಇದರ ಬದಲಾಗಿ ಆರಂಭದಲ್ಲೇ ತುಸು ವಾಸ ಪತ್ರದ ಚೂರ್ಣವನ್ನು ಬಿಸಿನೀರಿಗೆ ಹಾಕಿ ಬಳಸಿದರೆ, ಸೋಂಕಿನ ಪ್ರತಿಕ್ರಿಯೆಯಿಂದ ರಕ್ತವು ಗಟ್ಟಿಯಾಗುವಿಕೆಯ ಪ್ರಮೇಯವೇ ಇರುವುದಿಲ್ಲ.
ಆಯುರ್ವೇದದಲ್ಲಿ ರಕ್ತಪರಿಚಲನೆಯ ವ್ಯತ್ಯಾಸದಿಂದ ಉಂಟಾಗುವ ರೋಗವಾದ “ರಕ್ತಪಿತ್ತ”ಕ್ಕೂ ಮತ್ತು “ಕೆಮ್ಮು-ಉಸಿರಾಟದ ತೊಂದರೆ”ಯ ಕಾಯಿಲೆಗೂ ವಾಸಪತ್ರವನ್ನು ಬಳಸಲು ಹೇಳಿದ್ದಾರೆ. ಅಂದರೆ, ಇದರ ಅರ್ಥ ಪುಪ್ಪುಸಕ್ಕೆ ಹರಿಯುವ ರಕ್ತ ಪರಿಚಲನೆಯಲ್ಲಾಗುವ ದೋಷದಿಂದ ಬರುವ ಉಸಿರಾಟದ ತೊಂದರೆಗೆ “ವಾಸ” ಪತ್ರವು ಸೂಕ್ತವಾಗಿದೆ.
ಸೋಂಕಿತರು, ಸೋಂಕಿತರ ಪ್ರಥಮ ಸಂಪರ್ಕದಲ್ಲಿರುವವರು ಅಲ್ಲದೇ, ಸಾಮಾನ್ಯ ಜನರೂ ಸಹ ವೈರಸ್ ನಿವಾರಕ ರೋಗನಿರೋಧ ಶಕ್ತಿವರ್ಧಕ ದ್ರವ್ಯಗಳ ಜೊತೆಗೆ ಸ್ವಲ್ಪ ವಾಸಪತ್ರಗಳನ್ನು ಬಳಸಿದರೆ ರೋಗಬರುವ ಸಾಧ್ಯತೆ ಬಂದರೆ ವಿಕೋಪಕ್ಕೆ ಹೋಗುವ ಸಾಧ್ಯತೆ ಇಲ್ಲವೆಂದೇ ಹೇಳಬಹುದು.
ವಾಸ ಪತ್ರದ ಉಪಯೋಗಗಳು:
• ಶ್ವಾಸಹರ(ಉಸಿರಾಟದ ತೊಂದರೆ,ಅಸ್ತಮಾ)
• ಕಾಸಹರ(ಕೆಮ್ಮು ನಿವಾರಕ)
• ಸ್ವರ್ಯ (ಸ್ವರ ಪ್ರಸಾದಕ)
• ಹೃದ್ಯ (ಹೃದಯದ ರಕ್ತನಾಳಗಳ ಆರೋಗ್ಯ)
• ರಕ್ತಪಿತ್ತ (ಬಿ.ಪಿ ಮುಂತಾದ ರಕ್ತನಾಳಗಳ ವಿಕಾರಹರ)
• ಜ್ವರಘ್ನ (ಜ್ವರವನ್ನು ನಿವಾರಿಸುವುದು)
• ತೃಷ್ಣಾಶಾಮಕ (ಬಾಯಿ ಒಣಗುವಿಕೆ ದೂರಮಾಡುವುದು)
• ಅರ್ತಿಹರ (ನೋವು ನಿವಾರಕ)
• ಛರ್ದಿಘ್ನ (ವಾಂತಿ ನಿವಾರಕ)
• ಮೇಹಹರ (ಮಧುಮೇಹ ಬಾರದಂತೆ ತಡೆಯುವುದು)
• ಕುಷ್ಠಘ್ನ (ಚರ್ಮರೋಗ ಹರ)
• ರೂಚ್ಯ (ರುಚಿಕಾರಕ)
• ಕಾಮಲಾಹರ (ಕಾಮಾಲೆ ರೋಗ ನಿವಾರಕ)
• ವರ್ಣ್ಯ (ಕಾಂತಿದಾಯಕ)
ಆಧುನಿಕರ ಪ್ರಕಾರ ವಾಸಪತ್ರದ ಕಾರ್ಮುಕತಾ:
Bronchodialator
(ಉಸಿರಿನಾಳವನ್ನು ಹಿಗ್ಗಿಸುವುದು)
Expectorant
(ಉಸಿರಿನಾಳದ ತನುತ್ವವನ್ನು ಕಾಪಾಡುವುದು)
ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಸಂಶೋಧನೆಯ ಖಾಚಿತ್ಯತೆಗಾಗಿ ದುಮಾಡಿ ಕೆಳಗಿನ ಲಿಂಕ್ ನೋಡಿ-
https://www.academia.edu/28149441/Therapeutic_use_of_Adhatoda_vasica
ವಾಸಾ ಪತ್ರವನ್ನು ಹೊಂದಿರುವ
ಕಷಾಯ ಚೂರ್ಣ ಬಳಸಲು ಇಚ್ಛಿಸುವವರು ಸಂಪರ್ಕಿಸಿ:
9148702645
9606616165
8105451356
ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)
News by: Raghu Shikari- 7411515737