ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-5

ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-5

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-5

ಶಿವಮೊಗ್ಗದ ಅಥರ್ವ ಆಯುರ್ಧಾಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಿದ್ಧ ಗಿಡಮೂಲಿಕೆಗಳಿಂದ ತಯಾರಿಸಿದ 36 ಔಷಧಿ ದ್ರವ್ಯಗಳ ಮತ್ತು ಕಷಾಯ ಚೂರ್ಣದ ಮಾಹಿತಿಯನ್ನು ಪಡೆಯಲು ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಸೂಚನೆ:
ಈ 36 ದ್ರವ್ಯಗಳ ಸಂಯೋಜನೆಯ ವಿಜ್ಞಾನದಲ್ಲಿ ಅಡಗಿದ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾದಲ್ಲಿ ಯಾರೂ ಬಳಸಬೇಡಿ.

ಕಷಾಯದಲ್ಲಿನ ಘಟಕ ದ್ರವ್ಯ:
4) ಗುಡೂಚಿ/ಅಮೃತಬಳ್ಳಿ (tinospora cardifolia):
ಇದರ ಮುಂದುವರಿದ ಭಾಗ

ಬಾಯಿ, ಗಂಟಲು ಮತ್ತು ವಸಡುಗಳಿಗೆ ಆಗುವ ವೈರಸ್ ಸೋಂಕನ್ನು ನಿವಾರಿಸುವ ಆಯುರ್ವೇದೀಯ ಗಿಡಮೂಲಿಕೆಯೇ “ಅಮೃತಬಳ್ಳಿ”

ಹರ್ಪಿಸ್ ಸಿಂಪ್ಲೆಕ್ಸ್ ವೈರಾಣು (
Herpes simplex virus/HSV) type 1 and 2 ಎರೆಡೂ ವೈರಾಣುಗಳಿಗೆ ಇದುವರೆಗೂ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರದ ಕಾರಣ, ಕೊರೋನಾದಂತೆ ಇಲ್ಲಿಯೂ.. Paracetamol, Lidocine, acyclovir, valacyclovir ಗಳನ್ನು ಬಳಸಿ ಪ್ರಯತ್ನಿಸುತ್ತಾರೆ.

ಆದರೆ ಫಲಿತಾಂಶ ಶೂನ್ಯ. ಒಟ್ಟಾರೆ ಸ್ವಂತ ಬಲದ ಮೇಲಿ ರೋಗಿ ಗುಣಕಾಣಬೇಕೇ ಹೊರತು ಯಾವುದೇ ಸಿದ್ಧ ಔಷಧಿಗಳು ಇರದ ಕಾರಣ, ಆಯುರ್ವೇದದ ಶ್ರೇಷ್ಠ ಔಷಧಿದ್ರವ್ಯವಾದ ಎಲ್ಲ ರೀತಿಯ ರೋಗಗಳಿಗೆ “ರಾಮಬಾಣ” ಎನಿಸಿಕೊಂಡಿರುವ ಅಮೃತ ಬಳ್ಳಿಯ ಪ್ರಯೋಗ ಮಾಡಲಾಯಿತು.

HSV-1 ಇದು ವ್ಯಾಪಿಸುವುದು ಬಾಯಿ ಮತ್ತು ಗಂಟಲಿಗೆ ನಂತರ ಅಲ್ಲಿ ಗುಳ್ಳೆ ಮತ್ತು ಹುಣ್ಣುಗಳನ್ನು ಉಂಟುಮಾಡುವುದು.

ಸದ್ಯದ ಪರಿಸ್ಥಿತಿಯಲ್ಲಿ ನಾವು ಹೋರಾಡುತ್ತಿರುವ ಕೊರೋನಾ ವೈರಾಣು ದಾಳಿಯೂ ಸಹ ಬಾಯಿ, ಮೂಗು, ಗಂಟಲುಗಳಿಂದಲೇ ಆಗುವ ಕಾರಣ “ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕರೆಂಟ್ ಮೈಕ್ರೋಬಯಾಲಜಿ ಮತ್ತು ಅಪ್ಲೈಡ್ ಸೈನ್ಸ್” ಎಂಬ ಅಂತರಾಷ್ಟ್ರೀಯ ಪ್ರಕಟಣೆಯಲ್ಲಿ ಆರ್.ಪೃಥ್ವಿಶ್ ಎಂಬುವವರು ಮಂಡಿಸಿದ ಪ್ರಬಂಧವು 30.12.2017ರಂದೇ ಸ್ವೀಕೃತವಾದ ಸಂಶೋಧನೆಯ ಆಧಾರದಲ್ಲಿ ಕೊರೋನಾ ಸೋಂಕನ್ನೂ ಸಹ ಅಮೃತ ಬಳ್ಳಿಯನ್ನು ಬಳಸಿ ಅಲ್ಲಿಯೇ ನಿಯಂತ್ರಿಸಬಹುದೇ? ಈ ಚಿಂತನೆಯನ್ನು ನಮ್ಮ ಆಧುನಿಕ ವಿಜ್ಞಾನ ಮಾಡಬೇಕಲ್ಲವೆ?

H S Virus ಅನ್ನು ಅಮೃತ ಬಳ್ಳಿಯು ಎಷ್ಟು ಪ್ರಭಾವಶಾಲಿಯಾಗಿ ನಿಯಂತ್ರಿಸುತ್ತದೆ ಎಂದು ನಡೆದ ಸಂಶೋಧನೆಯ ಫಲಿತಾಂಶಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ.
Tinospora cordifolia inhibit the growth of HSV by 61.43 !!

ಅಂದರೆ ಅಮೃತಬಳ್ಳಿಯು ಹತರ್ಪಿಸ್ ಸಿಂಪ್ಲೆಕ್ಸ್ ವೈರಾಣುವಿನ ಸಂತಾನೋತ್ಪತ್ತಿಯನ್ನು ಶೇ.61.43 ರಷ್ಟು ತಡೆಯುತ್ತದೆ.

ಇದೊಂದೇ ಇಷ್ಟು ಪ್ರಮಾಣದಲ್ಲಿ ತಡೆದರೆ, ಇದರೊಂದಿಗೆ ಇನ್ನಷ್ಟು ದ್ರವ್ಯಗಳನ್ನು ಬಳಸಿ ತಯಾರಿಸುವ ಆಯುರ್ವೇದದ ಕಷಾಯಗಳು ಏಕೆ ವೈರಸ್ ನಿಯಂತ್ರಣವಲ್ಲ?!!!

ಈ ಸಂಶೋಧನೆಯಲ್ಲಿ ಅಮೃತ ಬಳ್ಳಿಯನ್ನು ಅಲ್ಕೋಹಾಲ್ ನಲ್ಲಿ ಕರಗುವ ಸಾರವನ್ನು ಬಳಸಿದ್ದಾರೆ. ನಾವೆಲ್ಲರೂ ಕಷಾಯವನ್ನು ಬಳಸಿದರೆ ನೀರಿನಲ್ಲಿ ಕರಗುವ ಸಾರವನ್ನು ಬಳಸಿದಂತೆ ಆಗುತ್ತದೆ. ಆದ್ದರಿಂದ ಅದನ್ನು ಸೋಸದೇ ಬಳಸಿದರೆ, ಅದರ ಎಲ್ಲಾ “ಸಾರ ಅಂಶಗಳನ್ನು” ಬಳಸಿದಂತೆ ಆಗುತ್ತದೆ.

ಹಾಗಾಗಿ ನಮ್ಮ ಸಂಸ್ಥೆಯ ರೋಗ ನಿರೋಧಕ ಶಕ್ತಿ ವರ್ಧನಾ ಕಷಾಯ ಚೂರ್ಣದಲ್ಲಿ ಅಮೃತ ಬಳ್ಳಿಯೊಂದಿಗೆ ಇನ್ನೂ 35 ದ್ರವ್ಯಗಳನ್ನು ಸೇರಿಸಿ ಅದರ ಗುಣ ವರ್ಧನೆ ಮಾಡಿದ್ದೇವೆ ಮತ್ತು ಸೇವನಾ ವಿಧಾನದಲ್ಲಿ ಸೋಸದೇ ಬಳಸಲು ಸೂಚಿಸಲಾಗಿದೆ.

ಈ ಸಂಶೋಧನೆಯ ಖಾಚಿತ್ಯತೆಗಾಗಿ-

https://www.ijcmas.com/7-1-2018/R.%20Pruthvish%20and%20S.M.Gopinatha.pdf

ಆಸಕ್ತರು ವಾಟ್ಸ್ ಅಪ್ ನಲ್ಲಿ ಸಂದೇಶಗಳನ್ನು ಕಳಿಸಬಹುದು
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!