ಶಿಕಾರಿಪುರ: ಕರ್ತವ್ಯದ ವೇಳೆ ಏಕಏಕಿ ಕುಸಿದು ಬಿದ್ದ ಆಶಾ ಕಾರ್ಯಕರ್ತೆ..!

ಶಿಕಾರಿಪುರ: ಕರ್ತವ್ಯದ ವೇಳೆ ಏಕಏಕಿ ಕುಸಿದು ಬಿದ್ದ ಆಶಾ ಕಾರ್ಯಕರ್ತೆ..!

ಶಿಕಾರಿಪುರ: ಕರ್ತವ್ಯ ನಿರ್ವಹಿಸುತ್ತಿರುವ ವೇಳ ಏಕಏಕಿ ಆಶಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ಇಂದು ನಡೆದಿದೆ.

ಶಿಕಾರಿಪುರ ಪಟ್ಟಣದ ಕಂಟೆನ್ಮೆಂಟ್ ವಲಯ ಕುಂಬಾರಗುಂಡಿ ಬೀದಿಯಲ್ಲಿ ಕಳೆದ ಒಂದು ವಾರದ ಹಿಂದೆ ಇಲ್ಲಿನ ನಿವಾಸಿಯೊಬ್ಬರಿಗೆ ಕರೋನ ಪಾಸಿಟಿವ್ ಬಂದಿದ್ದು ಒಂದು ವಾರದಿಂದ ಇಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿರುವುದಿಲ್ಲ ಎಂದು ಸ್ಥಳೀರು ಪ್ರತಿಭಟಿಸಿದರು.

ಇದರ ಹಿನ್ನಲೇಯಲ್ಲಿ ಇಂದು ಆರೋಗ್ಯ ಇಲಾಖೆ ಸಿಬ್ಬಂದಿಗಳು ಜನರ ಆರೋಗ್ಯ ತಪಾಸಣೆಗಾಗಿ ಆಗಮಿಸಿದ್ದು ಆಶಾ ಕಾರ್ಯಕರ್ತೆಯಾದ ನೇತ್ರಾವತಿ ಅವರು ನಿಶಕ್ತಿಯಿಂದ ಕುಸಿದು ಬಿದಿದ್ದಾರೆ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂಧಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ತಪಾಸಣೆ ನಡೆಸಿದ ವೈದ್ಯರಾದ ಡಾ.ವಿನಯ್ ಮಾತನಾಡಿ ಆಶಾ ಕಾರ್ಯಕರ್ತೆ ಕರ್ತವ್ಯವೇಳೆ ಧರಿಸಿದ ಪಿಪಿಟಿ ಕೀಟ್ ಹಾಗೂ ಪೇಸ್ ಮಾಸ್ಕ್ ನಿಂದ ಉಸಿರಾಡಲು ತೊಂದರೆಯಾಗಿರಬದುದು ಯಾವುದೇ ರೀತಿಯ ರೋಗದ ಲಕ್ಷಣಗಳಿಲ್ಲ ಯಾರು ತೊಂದರೆ ಪಡುವ ಅಗತ್ಯವಿಲ್ಲ ಬಿಸಿಲಿನ ತಪಾಮಾನಕ್ಕೆ ನಿಶಕ್ತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಒಂದು ಕಡೆ ರಾಜ್ಯದ್ಯಾಂತ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತಿದ್ದಾರೆ ಇತ್ತ ತಮ್ಮ ಕರ್ತವ್ಯಕ್ಕೆ ಮೊಸ ಮಾಡದೇ ಆಶಾ ಕಾರ್ಯಕರ್ತೆಯರು ಸೇವೆ ನಿರ್ವಹಿಸುತ್ತಿದ್ದು ಅವರಿಗೆ ಸೇವಾ ಭದ್ರತೆ ಹಾಗೂ ಸೂಕ್ತ ವೇತನ ನೀಡಲು ಸರ್ಕಾರ ಮುಂದಾಗಬೇಕಿದೆ.

Admin

Leave a Reply

Your email address will not be published. Required fields are marked *

error: Content is protected !!