ಆಸ್ಪತ್ರೆ ರಹಿತ ಜೀವನ: ನಮ್ಮ ಶರೀರದ ಕಚ್ಚಾವಸ್ತು ಯಾವುದು?
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-1
ನಮ್ಮ ಶರೀರದ ಕಚ್ಚಾವಸ್ತು ಯಾವುದು?
ಆಹಾರ
ಯಾವುದು ಆಹಾರ?
ಯಾವುದು ಜಠರಾಗ್ನಿಯನ್ನು ವಿರೋಧಿಸದೇ ಜೀರ್ಣವಾಗಿ ತಾನೇ ಶರೀರವಾಗುವುದೋ ಅದೇ ಆಹಾರ ಹಾಗಾದರೆ ಕ್ರಿಮಿಗಳಿಲ್ಲದೇ ಉಂಟಾಗುವ ಮಧುಮೇಹ, ಥೈರಾಯ್ಡಿಸಮ್ ಮುಂತಾದ ಸಾವಿರ ಸಾವಿರ ಕಾಯಿಲೆಗಳಿಗೆ ಕಾರಣ ಆಹಾರವಲ್ಲವೇ?
ಪ್ರೀಯ ಓದುಗರೇ..
ಆಹಾರದಲ್ಲಿ ಸಾಕಷ್ಟು ನೀರು ಇರಲಿ, ನೀರು ಕಡಿಮೆ ಇರುವಂತೆ ಆಹಾರ ತಯಾರಿಸಿ ತಿಂದು, ಒಂದು ಕೊಡ ನೀರು ಕುಡಿದರೆ, ಶರೀರವೂ ಬೆಳೆಯದು, ಮಲವೂ ಹೊರಹೋಗದು, ಪರಿಣಾಮ ಅವರವರ ಶರಿರದ ಪ್ರಕೃತಿಗನುಸಾರ ಯಾವುದೋ ಹೆಸರಿನ ಕಾಯಿಲೆ ಬಂದೇ ಬರುತ್ತದೆ.
ಹಾಗಾಗಿ ನೀರಿನ ಅಂಶ ಆಹಾರದ ಒಳಗೇ ಇರಲಿ ಆಗ ಜಠರಾಗ್ನಿ ಅದನ್ನು ಪಚಿಸಿ ಸಮಾನ ವಾತವು ಅದಕ್ಕೆ ಶರೀರ ಸಮಾನ ಭಾವ ತುಂಬಿ ಆಹಾರವನ್ನೇ ಶರೀರವನ್ನಾಗಿ ಮಾಡಿತ್ತದೆ.
ಹಾಗಾಗಿ ಆಹಾರದ ಆಯ್ಕೆ ಸರಿಯಾಗಿರಲಿ ಮತ್ತು ಅದರೊಳಗೇ ಸಾಕಷ್ಟು ನೀರಿದ್ದು ಮೆದುವಾಗಿರಲಿ
ಆಯುರ್ವೇದ ಸಲಹೆ ಪಾಲಿಸೋಣ ; ಆಸ್ಪತ್ರೆಗಳಿಂದ ದೂರ ಇರೋಣ ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ವುವುದು ಆರೋಗ್ಯಕರ ಲಕ್ಷಣವೇ?
Storty By : ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ.