ಶಿಕಾರಿಪುರ: ಹುಚ್ಚರಾಯಸ್ವಾಮಿ ಜಾತ್ರೆಗೆ ಪ್ರತಿವರ್ಷವೂ ಎದುರಾಗುತ್ತೆ ಏನಾದರೂ ಸಂಕಟ ಈ ವರ್ಷದ ಜಾತ್ರೆ ರದ್ದು..!

ಶಿಕಾರಿಪುರ:  ಹುಚ್ಚರಾಯಸ್ವಾಮಿ ಜಾತ್ರೆಗೆ ಪ್ರತಿವರ್ಷವೂ ಎದುರಾಗುತ್ತೆ ಏನಾದರೂ ಸಂಕಟ ಈ ವರ್ಷದ ಜಾತ್ರೆ ರದ್ದು..!

Story by: Raghu Shikari

ಶಿಕಾರಿಪುರ ಶ್ರೀ ಹುಚ್ಚರಾಯಸ್ವಾಮಿ ಜಾತ್ರೆ ಮಹೋತ್ಸವ ಇತಿಹಾಸ ಪ್ರಸಿದ್ದವಾಗಿದ್ದು ಹತ್ತಾರೂಸಾವಿರ ಜನರು ಪ್ರತಿ ವರ್ಷವೂ ದೂರದ ಊರುಗಳಿಂದ ಆಗಮಿಸುತ್ತಾರೆ ಹುಚ್ಚರಾಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಪ್ರತಿ ವರ್ಷವೂ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇರುತ್ತದೆ

ಕಳೆದ ಮೂರುರ್ನಾಲ್ಕು ವರ್ಷಗಳಿಂದ ಪ್ರತಿ ಬಾರಿಗೂ ಚುನಾವಣೆಗಳೂ ಎದರುರಾಗುತ್ತಿತ್ತು ಅದರಿಂದ ಬ್ರಹ್ಮ ರಥೋತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡುತ್ತಿದ್ದರು.

ಈ ವರ್ಷ ಕರೋನ ಕಾಟ..!

ಪ್ರತಿ ವರ್ಷವೂ ಒಂದಾಲ್ಲ ಒಂದು ತೊಂದರೆಗಳು ಜಾತ್ರಾ ಮಹೋತ್ಸವಕ್ಕೆ ತೊಡಕಾಗುತ್ತಿದ್ದು ಈ ವರ್ಷ ತಾಲೂಕಿನ ಶಾಸಕರು ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು  ಮತ್ತೋಮ್ಮೆ ಮುಖ್ಯಮಂತ್ರಿಯಾಗಿದ್ದು ಈ ವರ್ಷ ಅದ್ಧೂರಿಯಾಗಿ ನಡೆಯುತ್ತದೆ ಎಂದು ಜನರು ಸಂಭ್ರಮದಿಂದ ಇದ್ದುರು ಅದರೆ ಕನೋರ ವೈರಸ್ ಹಾವಳಿಯಿಂದ ಏಪ್ರೀಲ್ 14ರ ವರೆಗೂ 144 ಸೆಕ್ಷನ್ ಹಾಗೂ ಜನರು ಮನೆಯಿಂದ ಹೊರಗಡೆ ಹೊಗದಂತೆ ಪ್ರಧಾನ ಮಂತ್ರಿಗಳು ಸೂಚನೆ ನೀಡಿದ್ದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶದ ಮೆರೆಗೆ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ.

ಅತ್ಯಂತ ಪ್ರಸಿದ್ದ ಜಾತ್ರೆಯಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ ಪ್ರತಿ ವರ್ಷ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪವನರು ಕೂಡ ಜಾತ್ರಾ ಸಮಯದಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಸುಣ್ಣ ಬಣ್ಣ ಸಿದ್ದತೆ ಕೂಡ ಜೋರಾಗಿ ನಡೆಯುತ್ತಿತ್ತು ಅದರೆ ಕರನೋ ವೈರಸ್ ತಡೆಗಟ್ಟುವ ಹಿನ್ನಲೇಯಲ್ಲಿ ಜಾತ್ರಾ ಮಹೋತ್ಸವವು ರದ್ದಾಗಿದೆ ಪ್ರತಿ ವರ್ಷ ಯುಗಾದಿ ಹಬ್ಬದ ದಿನ ಬ್ರಹ್ಮ ರಥವನ್ನು ರಥದ ಮನೆಯಿಂದ ಹೊರತೆಗೆದು ಸಣ್ಣಪುಣ್ಣ ರಿಪೇರಿ ಹಾಗೂ ಆಲಂಕರದ ಕಾರ್ಯವನ್ನು ಪ್ರರಾಂಭ ಮಾಡುತ್ತಿದ್ದು

ದೇವರಿಗೆ ಕಂಕಣ ಕಟ್ಟಿ ಜಾತ್ರಾ ಮಹೋತ್ಸವದ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿತ್ತು ಅದರೆ ರಥವನ್ನು ಹೊರೆತೆಗೆದಿಲ್ಲ ಅಷ್ಟರಲ್ಲಿಯೇ ಜಿಲ್ಲಾಧಿಕಾರಿಗಳ ಆದೇಶ ಬಂದ ಹಿನ್ನಲೇಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ರಥೋತ್ಸವ ಜಾತ್ರೆಗಳನ್ನು ರದ್ದುಗೋಳ್ಳಿಸಿ ಆದೇಶ ನೀಡಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!