ಶಿಕಾರಿಪುರ ಜನತಾ ಕರ್ಪ್ಯೂಗೆ ಜನರಿಂದ ಭರ್ಜರಿ ಬೆಂಬಲ..!
ಶಿಕಾರಿಪುರ: ಮಂತ್ರಿ ನರೇಂದ್ರ ಮೋದಿ ಅವರ ಕರೋನ ವೈರಸ್ ನಿಯಂತ್ರಿಸುವ ದೃಷ್ಠಿಯಿಂದ ಜನತಾ ಕರ್ಪ್ಯೂ ಮನವಿ ಮಾಡಿದ್ದರು ಜನತೆ ವ್ಯಾಪಕ ಬೆಂಬಲವನ್ನು ಸೂಚಿಸಿದ್ದಾರೆ
ಪಟ್ಟಣದ ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ- ಬಸ್ ಸಂಚಾರ ಬಂದ್ ಮಾಡಲಾಗಿದ್ದು ಎಲ್ಲಾ ಹೋಟೆಲ್, ಬಾರ್ ಗಳು ಬಂದ್ ಆಗಿವೆ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ರಸ್ತೆಗಿಳಿಯದ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದವು ದಿನಬಳಕೆಗೆ ಅಗತ್ಯ ವಸ್ತು ಖರೀದಿಸಿ ಕೆಲವರು ರಸ್ತೆ ಆಗಮಿಸುತ್ತಿದ್ದಯ ಯಾವುದೇ ಅಂಗೆಡಿಗಳು ಇಲ್ಲದೆ ವಾಪಸ್ಸಗುವಂತಯಾತ್ತು
ಜನರನ್ನು ನಿಭಾಯಿಸಲು ಪೊಲೀಸರು ಹರಸಾಹಸ..!
ರಾತ್ರಿ ಹಗಲು ಎನ್ನದೇ ಪೋಲಿಸ್ ಇಲಾಖೆ ಸಿಬ್ಬಂದಿಗಳು ಜನರನ್ನು ನಿಭಾಹಿಸುವುದರಲ್ಲಿ ಹೈರಾಣಾಗಿ ಹೋಗಿದ್ದಾರೆ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿದರು ಜನತಾ ಕರ್ಫ್ಯೂ ಮಾಹಿತಿ ಇದ್ದರೂ ಕೆಲವರು ಬೈಕ್ ಮೂಲಕ ಕಾರ್ ಮೂಲಕ ರಸ್ತೆಯಲ್ಲಿ ತಿರುಗಾಡುತ್ತಿದ್ದರು.
ಸಂಸದ ಬಿ.ವೈ.ರಾಘವೇಂದ್ರರಿಂದ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು ಸಂಜೆ 5 ಗಂಟೆಯ ನಂತರದಲ್ಲಿ ಪ್ರಧಾನಿಗಳ ಸೂಚನೆಯಂತೆ ಶಿಕಾರಿಪುರದ ನಿವಾಸದಲ್ಲಿ ಕುಟುಂಬದೊAದಿದೆ ಕರ್ಪ್ಯೂನಲ್ಲಿ ಭಾಗಿಯಾದ ಸಂಜೆ ನಿವಾಸದ ಎದರು ಗಂಟೆ ಬಾರಿಸುವ ಮೂಲಕ ವೈದ್ಯರಿಗೆ, ಪೋಲಿಸರಿಗೆ ಕರೋನ ನಿವಾರಿಸಲು ಶ್ರಮಿಸುತ್ತಿರುವ ಎಲ್ಲಾ ವರ್ಗದ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಶಿಕಾರಿಪುರ ತಾಲೂಕಿನಲ್ಲಿ ಅತೀ ಗ್ರಾಮೀಣವಾಸಿ ಜನರಿದ್ದು ರೈತಾಪಿ ವರ್ಗದವರು ಈ ಕರ್ಪ್ಯೂ ನಲ್ಲಿ ಭಾಗವಹಿಸಿ ಮನೆಯಿಂದ ಯಾರೂ ಕೂಡ ಹೊರಗೆ ಬಾರದೆ ಎಲ್ಲಾ ಕೆಲಸಗಳನ್ನು ಬದಿಗೆ ಹೊತಿ ಕರ್ಪ್ಯೂನ ಯಶಸ್ವಿಗೆ ಸಹಕಾರಿಸಿದ್ದಾರೆ.