ಪಾಟೀಲ್ ಪುಟ್ಟಪ್ಪನವರ ಜೀವನ ಇಂದಿನ ಪತ್ರಕರ್ತರಿಗೆ ಸ್ಪೂರ್ತಿ ಆದರ್ಶವಾಗಿದೆ:ಎಸ್ .ಬಿ ಮಠದ್..!

ಪಾಟೀಲ್ ಪುಟ್ಟಪ್ಪನವರ ಜೀವನ ಇಂದಿನ ಪತ್ರಕರ್ತರಿಗೆ ಸ್ಪೂರ್ತಿ ಆದರ್ಶವಾಗಿದೆ:ಎಸ್ .ಬಿ ಮಠದ್..!

ಶಿಕಾರಿಪುರ: ನಾಡಿನ ಹಿರಿಯ ಪತ್ರಕರ್ತರು ನಾಡೋಜ ಪ್ರಶಸ್ತಿ ಪುರಸ್ಕೃತರಾದ ಪಾಟೀಲ್ ಪುಟ್ಟಪ್ಪನವರು ನಮ್ಮ ಮುಂದಿನ ಪತ್ರಕರ್ತರಿಗೆ ಸಾಹಿತಿಗಳಿಗೆ ಅವರ ಜೀವನ ಆದರ್ಶ ಸ್ಪೂರ್ತಿದಾಯವಾಗಿದೆ ಎಲ್ಲಾರೂ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಪತ್ರಿಕಾ ಜೀವನದ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ಪಟ್ಟಣ ಪತ್ರಿಕಾ ಭವನದಲ್ಲಿ ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತರಾದ ಪಾಟೀಲ್ ಪುಟ್ಟಪ್ಪ ಅವರ  ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಎಸ್.ಬಿ ಮಠದ್ ಮಾತನಾಡಿದರು.

ಅಂದಿನ ಕಾಲದಲ್ಲಿಯೇ ಪಾಟೀಲ್ ಪುಟ್ಟಪ್ಪನವರ ಪತ್ರಿಕೋದ್ಯಮಕ್ಕೆ ವಿದ್ಯಾರ್ಥಿಯಗಿ‌ ಕ್ಯಾಲಿಪೋರ್ನಿಯಾದಲ್ಲಿ ಎಂಎಸ್ ಸಿ‌ ಮುಗಿಸಿ ಭಾರತಕ್ಕೆ ಬಂದು ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ಯುವ ವಯಸ್ಸಿನಲ್ಲಿ  ನವಯುಗ, ಆರ್ ಆರ್ ದಿವಕರ್ ಪತ್ರಿಕೆಗಳಲ್ಲಿ ವೃತಿ ಜೀವನವನ್ನು ಆರಂಭಿಸಿದರು

ಪ್ರಪಂಚ ಎನ್ನುವ ವಾರ ಪತ್ರಿಕೆಯನ್ನು ಸ್ವತಃ ಅವರೆ ಆರಂಭಿಸುವ ಮೂಲಕ  ಅತ್ಯಂತ ಜನಪ್ರೀಯ ಪತ್ರಿಕೆಯಾಗಿ ರಾಜ್ಯದಲ್ಲಿ ಬೆಳವಣಿಗೆ ಕಂಡಿತು ಪಾಪು ಅವರ ಅತ್ಯಂತ ಪ್ರಭಾವಶಾಲಿ ಪತ್ರಕರ್ತರಾಗಿದ್ದು ಅವರನ್ನು ಭೇಟಿಯಾಗಲು ರಾಜಕಾರಣಿಗಳೇ ಕಾಯುತ್ತಿದ್ದರು ಅದರೆ ಅವರು ರಾಜಕೀಯವನ್ನು ಮಾಡಲಿಲ್ಲ ಜನರ ಒಳಿತಿಗಾಗಿ 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು.

 ಕರ್ನಾಟಕ ಏಕೀಕರಣ ಚಳುವಳಿ ಕರ್ನಾಟಕ ವಿಶ್ವವಿದ್ಯಾಲಯ ಪ್ರರಂಭ ಪುಟ್ಟಪ್ಪ ಅವರ ಯೋಗದಾನ , ವಿಶ್ವವಾಣಿ ದಿನ ಪತ್ರಿಕೆ ಮನೋರಮ ಸಿನಿಮಾ ಪತ್ರಿಕೆ ಕನ್ನಡದಲ್ಲಿ ಕಸ್ತೂರಿ ಡೈಜಸ್ಟ್ ಸಂಗಮ , ಮಲ್ಲಿಗೆ ಅನೇಕ ಹೊಸ ಬರಹಗಾರಿಗೆ ವೇದಿಕೆಗಳಾಗಿದ್ದವು ಹುಬ್ಬಳ್ಳಿ ಕೇಂದ್ರವಾಗಿ ಇಟ್ಟುಕೊಂಡು ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದ್ದರು.

ವಿಶಾಲ ಕರ್ನಾಟಕ ಹುಬ್ಬಳ್ಳಿ ರಾಜಧಾನಿಯಾಗಬೇಕು ಎಂಬ ಮಹಾದಾಸೆಯನ್ನು ವ್ಯಕ್ತ ಪಡಿಸಿದರು ಅದರೆ ಕೆಂಗಲ್ ಹನುಮಂಯ್ಯನರು ರಾಜಧಾನಿ ಕೇಂದ್ರ ಬೆಂಗಳೂರು ಬದಲಾವಣೆ ಅದರೆ ಅನೇಕ ಸಮಸ್ಯೆ ಎದುರಾಗುತ್ತದೆ ಎನ್ನುವ ಉದ್ದೇಶದಿಂದ ವಿಧಾನ ಸೌಧ ಕಟ್ಟಿಸಿದರು ಹುಬ್ಬಳ್ಳಿಗೆ ಕರ್ನಾಟಕ‌ ಮೇಡಿಕಲ್  ನೀಡಿದರು ಇದು ಪಾಪು ಅವರ ಪ್ರಯತ್ನದ ಫಲವಾಗಿತ್ತು.

ಏಕೀಕೃತ ಕರ್ನಾಟಕವನ್ನು ಹೊಡೆಯಬಾರರು ಎಂದು ಅವರ ಮನಸ್ಸಿನಲ್ಲಿ ಎಂದಿಗೂ ಇತ್ತು ಅದರೆ ಹೈದಾರಬಾದ್ ಕರ್ನಾಟಕ ರಾಜಕೀಯ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದೇ ಕುಠಿತವಾಗಿದೆ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರ ದ್ವನಿ‌ ಎತ್ತಿದರು ಅದರೂ ನಮ್ಮ ಕರ್ನಾಟಕವನ್ನು ಒಡೆಯಲು ಅವರಿಗೆ ಮನಸ್ಸಿರಿಲ್ಲ ರಾಜಕಾರಣಿಗಳಿಗೆ ಸರ್ಕಾರಗಳಿಗೆ ತಮ್ಮ ಕೂಗು ಕೇಳಲಿ ಎಂಬುದಷ್ಟೆ ಅವರ ಹೋರಾಟವಾಗಿತ್ತು ಎಂದರು.

ಅವರ ಜೀವನದಲ್ಲಿ ಎಂದಿಗೂ ಯಾವ ರಾಜಕಾರಣಿಗಳ ಸಲಾಂ‌ ಹೊಡೆಯುತ್ತಿರಲಿಲ್ಲ ನೇರ ನುಡಿ ನೇರ ವ್ಯಕ್ತಿತ್ವ ಪತ್ರಕರ್ತರು ಪಾಪು ಅವರ‌ ದಾರಿಯಲ್ಲಿ ನಾವೆಲ್ಲ ಸಾಗೋಣ ಕನ್ನಡ ನೆಲೆ ಭಾಷೆ , ಪತ್ರಿಕಾ ಧರ್ಮ ನೀತಿಗಳನ್ನು ಉಳಿಸೊಣ  ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಕೆ.ಎಸ್ ಹುಚ್ಚರಾಯಪ್ಪ, ನಿರ್ಧೇಶಕರಾದ ಅರುಣ್ ಕುಮಾರ್, ತಾಲೂಕ್ ಸಂಘದ ಅಧ್ಯಕ್ಷರಾದ ರಾಘವೇಂದ್ರ ಹೆಚ್ ಆರ್, ಕಾರ್ಯದರ್ಶಿ ಚಂದ್ರಶೇಖರ್ ಮಠದ್,ಬಸವರಾಜ್ ,ಸದಸ್ಯರಾದ ಬಾಲಕೃಷ್ಣ ಜೋಯ್ಸ್,ರಘು ಹೆಚ್.ಎಸ್ ಪ್ರಕಾಶ್, ರಾಜರಾಮ್ ಜಾಧವ್,ಪ್ರದೀಪ್ ದಿಕ್ಷಿತ್ , ರಘು ಶಿಕಾರಿ ಇದ್ದರು,

Admin

Leave a Reply

Your email address will not be published. Required fields are marked *

error: Content is protected !!