ಕರೋನ ಹರಡದಂತೆ ಎಚ್ಚರ ವಹಿಸಲು ಕ್ರಮ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ: ತಹಶೀಲ್ದಾರ್ ಎಂ.ಪಿ ಕವಿರಾಜ್..!

ಕರೋನ ಹರಡದಂತೆ ಎಚ್ಚರ ವಹಿಸಲು ಕ್ರಮ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ: ತಹಶೀಲ್ದಾರ್ ಎಂ.ಪಿ ಕವಿರಾಜ್..!

ಶಿಕಾರಿಪುರ ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವಿವಿಧ ಇಲಾಖೆಗ ತುರ್ತು ಸಭೆ ಕರೆಯಲಾಗಿದ್ದು ಈ ಸಂದರ್ಭದಲ್ಲಿ ತಹಶೀಲ್ದಾರ್ ಕವಿರಾಜ್ ಮಾತನಾಡಿ ಕರೋನ ಹರಡದಂತೆ ಮುನ್ನಚ್ಚರಿಕರೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಕೆಲವು ಸೂಚನೆಗಳನ್ನು ನೀಡಿದ್ದು ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಡದಂತೆ ಸೂಚನೆಯನ್ನು ನೀಡಿದ್ದಾರೆ.

ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿಯೇ ಅಧಿಕಾರಿಗಳು ಇರಬೇಕು ಇನ್ನೂ ಕರೋನ ವೈರಸ್ ಕುರಿತು ಸುಳ್ಳು ಸುದ್ದಿಯನ್ನು ಹಬ್ಬಿಸದಂತೆ ಹಾಗೂ ಮಾಸ್ಕ್ ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಲ್ಲಿ ತಮ್ಮ ಇಲಾಖೆ ತಿಳಿಸಲು ಸೂಚನೆ ನೀಡಿದರು.

ಆರೋಗ್ಯಾಧಿಕಾರಿ ಡಾ.ಚಂದ್ರಪ್ಪ ಮಾತನಾಡಿ ಕರೋನ ವೈರಸ್ ಒಬ್ಬ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಲಕ್ಷಣವನ್ನು ಹೊಂದಿದ್ದು ಅದಷ್ಟು ಮುಂಜಾಗ್ರತಾವಾಗಿ ಜನರು ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು ಸೊಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಪ್ರತಿ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಪ್ರೂ‌ಕಾರ್ನರ್ ಎಂಬ ಹೊಸ ಕೌಂಟರ್ ಸರ್ಕಾರ ಅಧಿಕೃತ ಆದೇಶದ ಮೇರೆಗೆ ತೆರೆಯಲಾಗಿದೆ.

ಜಗತಿನಲ್ಲಿ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ ಹೋಗುತ್ತವೆ ಕಾಯಿಲೆ ಬರುವ ಮುನ್ನ ನಾವು ಎಚ್ಚರ ವಹಿಸಬೇಕು ಉಗುಳು ಕಫ.ಕೇಮ್ಮು , ಸಿತ ಸೋಂಕಿತ ರೋಗಿಯ ಮುಟ್ಟಿದರು ರೋಗ ಹರಡುವ ಸಾಧ್ಯತೆ ಇದೆ ಕಫದ ಮೂಲಕ ಬಿದ್ದಾಗ ಸೊಂಕು ಜೀವಂತವಾಗಿರುತ್ತದೆ.

ಸಾರ್ವಜನಿಕ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಕಛೇರಿ ಸಿಬ್ಬಂಧಿಗಳು ಕಛೇರಿಯಲ್ಲಿ ನಾವು ಮಾಕ್ಸ್ ಬಳಸಬೇಕು  ಸೋಪು ಹಾಕಿಕೊಂಡು ಕೈಗಳನ್ನು ತೊಳೆದುಕೊಳ್ಳಬೇಕು ಗ್ರಾಮೀಣ ಭಾಗದಲ್ಲಿ ನಮ್ಮ ಇಲಾಖೆಯ ಆಶಾ ಕಾರ್ಯಕರ್ತರೆಯರು ಇದ್ದು ಯಾವುದೇ ರೀತಿಯ ಕರೋನ ಸೊಂಕಿನ ಬಗ್ಗೆ ಮಾಹಿತಿ ಅಥವಾ ರೋಗಿಗಳ ಮೇಲೆ ನಿಗಾ ಹಿಡಲಾಗಿದೆ ಇನ್ನೂ ವಿದೇಶದಿಂದ ಬಂದವರ ಪರೀಕ್ಷೆ  ನಡೆಸಲಾಗುತ್ತದೆ ಎಂದರು.

ಯಾವುದೇ ಕಾಯಿಲೆಗಳಿಗೆ ಮೂಲ ಸ್ವಚ್ಚತೆ ಇಲ್ಲದೇ ಇರುವುದು ಅದರಿಂದ ನಗರ ಪ್ರದೇಶದಲ್ಲಿ ಪುರಸಭೆ ಅಧಿಕಾರಿಗಳು ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕು ಮತ್ತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಆರೋಗ್ಯ ಇಲಾಖೆಯ ಈ ನಿಟ್ಟಿನಲ್ಲಿ ಪೋಸ್ಟರ್ ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಹಚ್ಚಲಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪಶುವೈಧ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿದ ಕರೋನ ವೈರಸ್ ಕುರಿತು ಸಾರ್ವಜನಿಕರಿಗೆ ಸುಳ್ಳು ಸುದ್ದಿಯನ್ನು ಹರಿದಾಡುತ್ತಿದ್ದು ಕೋಳಿಯಿಂದ ಯಾವುದೇ ಕಾಯಿಲೆ ಹರಡಿಲ್ಲ ಕೋಳಿಯಿಂದ ಕಾಯಿಲೆ ಹರಡಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಇದರಿಂದ ಕುಕ್ಕುಟೋಧ್ಯಮಕ್ಕೆ ತುಂಬಾ ನಷ್ಟ ಉಂಟಾಗಿದೆ ಜನರು ನಿರ್ಭಯವಾಗಿ ಕೋಳಿ ಮಾಂಸ ಕುರಿ ಮಾಂಸವನ್ನು ಬಳಸಬಹುದು ಎಂದರು.

ಈ ಸಂದರ್ಭದಲ್ಲಿ ವಲಯ ತಾ.ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ , ಸಿಪಿಐ ಬಸವರಾಜ್, ಕೃಷಿ ನಿರ್ಧೇಶಕ ಕಿರಣ್ ಕುಮಾರ್ , ಉಪ ತಹಶೀಲ್ದಾರ್ ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಬಿಸಿಎಂ ವಿಸ್ತಾರಣಾಧಿಕಾರಿ ಶೋಭಾ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!