ಇನ್ನೂ ಮೂರು ವರ್ಷಗಳ ಪೋಷಕರು ಸರದಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಆಗಬೇಕು: ಸುರೇಶ್ ಕುಮಾರ್..!

ಇನ್ನೂ ಮೂರು ವರ್ಷಗಳ ಪೋಷಕರು ಸರದಿ ಸಾಲಿನಲ್ಲಿ ನಿಂತು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಆಗಬೇಕು: ಸುರೇಶ್ ಕುಮಾರ್..!

ಸಾಗರ ತಾಲೂಕು ಕೆಳದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್. ಒಂದು ಶಾಲೆ ಶತಮಾನ ಪೂರೈಸುವುದು ಸಾಮಾನ್ಯ ಸಂಗತಿಯಲ್ಲ. ಈ ಶಾಲೆಯನ್ನು ಆರಂಭಿಸಲು ಶ್ರಮಿಸಿದ ಮಹನೀಯರು ಎಲ್ಲರೂ ಅಭಿನಂದನಾರ್ಹರು ಎಂದವರು ನುಡಿದರು.

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಆಸಕ್ತಿಯ ಕಲಿಕೆಗೆ ಒತ್ತು ನೀಡಬೇಕು. ಮಕ್ಕಳು ಶಾಲೆಯಲ್ಲಿ ಕಳೆಯುವ ಪ್ರತಿ ಕ್ಷಣವೂ ಸಂತಸದಾಯಕವಾಗಿರಬೇಕು. ಮಕ್ಕಳ ಕಲಿಕೆ, ಅವರ ಉಜ್ವಲ ಭವಿಷ್ಯಕ್ಕಾಗಿ ಸಮಯದ ಸದುಪಯೋಗವಾಗಬೇಕು. ಅದಕ್ಕಾಗಿ ಸರ್ಕಾರ ಯೋಜನೆಯೊಂದನ್ನು ರೂಪಿಸಿದ್ದು ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಬೆಂಗಳೂರಿನಂತ ಮಹಾನಗರಗಳಲ್ಲಿ ಜನಸಾಮಾನ್ಯರೂ ಕೂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಅದಕ್ಕಾಗಿ ಪೋಷಕರು ತಮ್ಮ ಸಂಪಾದನೆಯ ಶೇ.40ರಷ್ಟು ಹಣವನ್ನು ವ್ಯಯ ಮಾಡುತ್ತಿದ್ದಾರೆ. ಫೋಷಕರ ಈ ಖರ್ಚು ಉಳಿಯುವಂತಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಮಿತವ್ಯಯ ಸಾಧ್ಯವಾಗಲಿದೆ ಎಂದರು.

ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಸುಧಾಮೂರ್ತಿ ಅವರು ರಾಜ್ಯದ ಆಯ್ದ 1000 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ರೂಂ ನಿರ್ಮಿಸಿಕೊಡಲು, 1000 ಶಿಕ್ಷಕರಿಗೆ ವಿಜ್ಞಾನ ವಿಷಯದಲ್ಲಿ ವಿಶೇಷ ತರಬೇತಿ ನೀಡಲು ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಅಲ್ಲದೆ ರಾಜ್ಯದ 10 ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥಿತ ಗ್ರಂಥಾಲಯ ನಿರ್ಮಿಸಿಕೊಡಲು ಸಮ್ಮತಿ ಸೂಚಿಸಿದ್ದಾರೆ ಎಂದರು.

ಸಮಾಜದಿಂದ ಎಲ್ಲವನ್ನ ಪಡೆದವರು ಸಮಾಜಕ್ಕಾಗಿ ಏನಾದರೂ ನೀಡಬೇಕು ಎಂಬ ಮನಸ್ಥಿತಿಯವರು ತುಂಬಾ ಕಡಿಮೆ ಸಾರ್ವಜನಿಕರು ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕೆಳದಿ ಕಿತ್ತೂರಿನಷ್ಟೇ ಮಹತ್ವದ ಸ್ಥಳವಾಗಿದೆ. ಜನ ಸಾಮಾನ್ಯರು ಈ ಸ್ಥಳದ ಮಹತ್ವ ತಿಳಿಯಲು ಮುಂದಾಗಬೇಕು. ಆಗ ನಮ್ಮ ಹಿಂದಿನ ಜನಜೀವನ ಜನಜೀವನದ ಬಗ್ಗೆ ನಮಗೆ ಹೆಮ್ಮೆ ಮೂಡಲಿದೆ ಎಂದರು.

Admin

Leave a Reply

Your email address will not be published. Required fields are marked *

error: Content is protected !!