ಶಿವಮೊಗ್ಗ: ಬಿ.ಎಸ್ ವೈ ಹುಟ್ಟುಹಬ್ಬ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿತ್ತು ಗೋತ್ತ..!

ಶಿವಮೊಗ್ಗ: ಬಿ.ಎಸ್ ವೈ ಹುಟ್ಟುಹಬ್ಬ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿತ್ತು ಗೋತ್ತ..!

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ 78 ನೇ ವರ್ಷದ ಜನ್ಮದಿದನ ಅಂಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅದ್ದೂರಿ ಆಚರಣೆ ಪೂಜೆ ,ಹೋಮ, ಆರೋಗ್ಯ ಶಿಬಿರಗಳು ನಡೆಯಿತು.

ಶಿವಮೊಗ್ಗದ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ವತಿಯಿಂದ ಅಯೋಜಿಸಿದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ ಭೂಮಿಯ ಮೇಲೆ ಹುಟ್ಟಿದ ಮೇಲೆ ಎಲ್ಲಾರು ಹುಟ್ಟುದಿನ ಬರುತ್ತೆ ಅದರೆ ಸಾಧಕರ ಹುಟ್ಟುಹಬ್ಬ ಮಾತ್ರ ವಿಶೇಷವಾಗಿರುತ್ತದೆ ತುರ್ತುಪರಿಸ್ಥಿತಿಯಲ್ಲಿ ಬಿಎಸ್ ವೈ ಹೋರಾಟ, ಬುಗರ್ ಹುಕುಂ ಹೋರಾಟ, ಕಾಶ್ಮೀರ ಲಾಲ್ ಚೌಕ್ ನಲ್ಲಿ ರಾಷ್ಟ್ರೀಯ ಧ್ವಜ, ದಲಿತ ಪರ ಹೋರಾಟದಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶೇಷವಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಆಸ್ಪತ್ರೆ ರೋಗಿಗಳಿ ಹಣ್ಣು ವಿತರಣೆ:

ಜಿಲ್ಲಾ ಬಿಜೆಪಿಯ ವತಿಯಿಂದ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರ ನೇತೃತ್ವದಲ್ಲಿ ಜಿಲ್ಲಾ ಮೇಗ್ಗಾನ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಭ್ರೇಡ್ ವಿತರಣೆ ಮಾಡಲಾಯಿತು.

ಶಿಕಾರಿಪುರ ಪಟ್ಟಣದ ಐಶ್ವರ್ಯ ಹೋಮಿಯೋ ಫಾರ್ಮಸಿ ಪ್ರಕೃತಿ ಚಿಕಿತ್ಸಾಲಯದ ವತಿಯಿಂದ ಡಾ ಮಾಲತೇಶ್ ಮತ್ತು ಡಾ ನಾಗವೇಣಿ ಮಾಲತೇಶ್  ಕುಸ್ಕೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿದರು.

ಹೋಮ ಪೂಜೆ:

ಜಿಲ್ಲಾ ಜಂಗಮ ವೀರಶೈವ  ಅರ್ಚಕರ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಆಯುರ್ ಆರೋಗ್ಯ ಪ್ರಾಪ್ತಿಗಾಗಿ ಆಯುಷ್ಯ ಹೋಮ ಮತ್ತು ಕಾಶಿ ವಿಶ್ವನಾಥ ಸ್ವಾಮಿ,ಯಡಿಯೂರು ಶ್ರಿ ಸಿದ್ದಲಿಂಗೇಶ್ವರ ಸ್ವಾಮಿಗೆ ಮಹಾ ರುದ್ರಭೀಷೇಕ ಕಾರ್ಯಕ್ರಮವನ್ನು ನಡೆಸಲಾಯಿತು.

ಶಿಕಾರಿಪುರ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಗ್ರಾಮದೇವರಿಗೆ ಬಿ.ಎಸ್ ಯಡಿಯೂರಪ್ಪನವರ ಹೆಸರಿನಲ್ಲಿ ವಿಷೇಶ ಪೂಜೆ ನಡೆಸಲಾಯಿತು ಶಿಕಾರಿಪುರ ನಗರದಲ್ಲಿ ಕಾರ್ಯಕರ್ತರು ಶ್ರೀ ಹುಚ್ಚರಾಯಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಶಿಕಾರಿಪುರದ ಮೂರನೇ ವಾರ್ಡ್ ನ ಪುರಸಭಾ ಸದಸ್ಯರಾದ ಸುನಂದ ಮಂಜುನಾಥ್ ದಂಪತಿ ಶ್ರೀ ದುರುಗಮ್ಮ ದೇವಿ ದೇವಸ್ಥಾನ ಕುಂಬಾರಗುಂಡಿಯಲ್ಲಿ ದೇವಸ್ಥಾನ ವಿಷೇಶ ಅಲಂಕರ ಮಾಡಿಸಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು.

ಜಿಲ್ಲೆಯ ಎಲ್ಲಾ ತಾಲೂಕ್ ಕೇಂದ್ರಗಳಲ್ಲೂ ದೇವಸ್ಥಾನಗಳಲ್ಲಿ ಪೂಜೆ ಪ್ರಮುಖ ವೃತ್ತಗಳಲ್ಲಿ ಕಾರ್ಯಕರ್ತರ ಬ್ಯಾನರಗಳು ವಿಷೇಶ ರಂಗು ತುಂಬಿದ್ದು ಎಲ್ಲಾ ಕಾರ್ಯಕರ್ತರು ಅಭಿಮಾನಿಗಳು ತಮ್ಮ ನಾಯಕರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!