ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪೆನಿಗಳು ಭಾಗಿ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್..!

ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪೆನಿಗಳು ಭಾಗಿ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್..!

ಶಿವಮೊಗ್ಗ: ಶಿವಮೊಗ್ಗದಲ್ಲಿ ಫೆಬ್ರವರಿ 24ಮತ್ತು 25ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪೆನಿಗಳು ಭಾಗವಹಿಸಲಿದ್ದು, ಈಗಾಗಲೇ 102 ಕಂಪೆನಿಗಳು ಹೆಸರು ನೊಂದಾಯಿಸಿವೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಉದ್ಯೋಗ ಮೇಳದ ಸಿದ್ಧತೆಗಳ ಮಾಹಿತಿ ನೀಡಿದರು.

ಇದುವರೆಗೆ 5820 ಅಭ್ಯರ್ಥಿಗಳು ಹೆಸರು ನೊಂದಾಯಿಸಿದ್ದು, ಕೊನೆಯ ಹಂತದವರೆಗೂ ಆನ್‍ಲೈನ್‍ನಲ್ಲಿ ಹೆಸರು ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಹೆಸರು ನೊಂದಾಯಿಸಿರುವ 102 ಕಂಪೆನಿಗಳ ಪೈಕಿ 32 ಸಾಫ್ಟ್‍ವೇರ್, 12 ಉತ್ಪಾದನಾ ವಲಯದ ಕಂಪೆನಿಗಳು, 53 ಸೇವಾ ಕ್ಷೇತ್ರ ಹಾಗೂ 5ಕೃಷಿ ಆಧಾರಿತ ಕಂಪೆನಿಗಳು ಸೇರಿವೆ. 150ಕ್ಕೂ ಅಧಿಕ ಕಂಪೆನಿಗಳು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಂಪೆನಿಗಳ ಆವಶ್ಯಕತೆಗಳ ಮಾಹಿತಿಗಳನ್ನು ಉದ್ಯೋಗ ಮೇಳದಲ್ಲಿ ಎಲ್‍ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಗುವುದು. ಇದರಿಂದ ಅಭ್ಯರ್ಥಿಗಳು ನೇರವಾಗಿ ಸಂದರ್ಶನ ಎದುರಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದರು.

ಉದ್ಯೋಗ ಮೇಳಕ್ಕೆ ಪೂರಕವಾಗಿ ಬೆಳಗ್ಗಿನ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಹಾಗೂ ಪದವಿ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕುರಿತು, ಸಂದರ್ಶನವನ್ನು ಯಾರ ರೀತಿ ಎದುರಿಸಬೇಕು ಎಂಬ ಕುರಿತು ತಜ್ಞರಿಂದ ಉಪನ್ಯಾಸ ಆಯೋಜಿಸಲಾಗಿದೆ. ಇದರಿಂದ ಕಂಪೆನಿಗಳ ನಿರೀಕ್ಷೆ, ಮಾರುಕಟ್ಟೆಯಲ್ಲಿರುವ ಅವಕಾಶಗಳ ಇತ್ಯಾದಿಗಳ ಬಗ್ಗೆ ಮಾಹಿತಿ ದೊರೆಯಲಿದೆ ಎಂದರು.

ಕೆಎಫ್‍ಡಿ: ಜಿಲ್ಲೆಯಲ್ಲಿ ಇದುವರೆಗೆ ಮಂಗನಕಾಯಿಲೆಯ 51 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 21 ಪ್ರಕರಣಗಳಲ್ಲಿ ಗುಣಮುಖರಾಗಿದ್ದಾರೆ. ಇನ್ನುಳಿದಂತೆ ಎಲ್ಲರೂ ಚೇತರಿಸುತ್ತಿದ್ದು, ಸಧ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಎಫ್‍ಡಿ ಕಾಣಿಸಿಕೊಳ್ಳುವವರಿಗೆ ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದ ಬಳಿಕ 10ದಿನಗಳ ಕಾಲ ಅವರನ್ನು ಅವರ ಮನೆಯಲ್ಲಿ ನಿರಂತರ ನಿರೀಕ್ಷಣಾ ಅವಧಿಯಲ್ಲಿ ಇಡಲಾಗುವುದು. ಆ ಬಳಿಕ ಸಂಪೂರ್ಣ ಗುಣಮುಖರಾಗುವುದನ್ನು ಖಾತ್ರಿಪಡಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಕೌಶಲ್ಯಾಧಿಕಾರಿ ಗಣಪತಿ ನಾಯಕ್, ಉದ್ಯೋಗ ಅಧಿಕಾರಿ ಖಲಂದರ್ ಖಾನ್ ಉಪಸ್ಥಿತರಿದ್ದರು.

Admin

Leave a Reply

Your email address will not be published. Required fields are marked *

error: Content is protected !!