ಶಿಕಾರಿಪುರ: ಫೆ 1-2 ಕ್ಕೆ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ..!

ಶಿಕಾರಿಪುರ: ಶಿಕಾರಿಪುರ ನಗರದ ನರಸಪ್ಪ ಸ್ಮಾರಕ ಬಯಲು ರಂಗಮAದಿರದಲ್ಲಿ ಫೆ 1 ಮ್ತತು 2 ರಂದು ಆಹ್ವಾನಿತ ಪುರುಷರ ತಂಡದ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಕುಮದ್ವತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೊಜಿಸಲಾಗಿದೆ ಎಂದು ಕ್ಲಬ್ನ ಅಧ್ಯಕ್ಷರಾದ ನಾಗರಾಜ ಗೌಡ ಹೇಳಿದರು.

ಪಟ್ಟಣ ಪತ್ರಿಕಾ ಭವನದಲ್ಲಿ ಪತ್ರಿಕಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವರ್ಷ ವಾಲಿಬಾಲ್ ಪಂದ್ಯಾವಳಿ ಅಥಾವ ಕಬ್ಬಡಿ ಈ ರೀತಿ ಕ್ರೀಡಾಕೂಟವನ್ನು ಅಯೋಜನೆ ಮಾಡಲಾಗುತ್ತಿದ್ದು ಈ ವರ್ಷ ರಾಜ್ಯ ಮಟ್ಟದ ಪುರುಷರ ಅಹ್ವಾನಿತ ವಾಲಿಬಾಲ್ ಪಂದ್ಯಾವಳಿಯನ್ನು ಅಯೋಜಿಲಾಗಿದೆ ಎಂದರು.
ಈ ಪಂದ್ಯಾವಳಿಯಲ್ಲಿ ಅಹ್ವಾನಿತ ತಂಡಗಳಾದ ಮಂಗಳೂರು,ಉಡುಪಿ,ಹಾಸನ, ಹುಬ್ಬಳ್ಳೀ ರೈಲ್ವೆಸ್, ಮಡ್ಡಿ ಬಾಯ್ಸ್, ಶಿವಮೊಗ್ಗ ಕುಮದ್ವತಿ ಸ್ಪೋರ್ಟ್ಸ್ ಕ್ಲಬ್ ಶಿಕಾರಿಪುರ ಈ ಒಟ್ಟು 8 ತಂಡಗಳು ಆಗಮಿಸಲಾಗಿದ್ದು ರಾಷ್ಟç ರಾಜ್ಯ ಮಟ್ಟವನ್ನು ಪ್ರತಿನಿಧಿಸುವಂತ ಗ್ರಾಮೀಣ ಪ್ರತಿಭೆಗಳು ತಮ್ಮ ತಾಲೂಕಿನಲ್ಲಿಯೂ ಇದ್ದು ಅವರನ್ನು ಗುರುತಿಸುವ ನಿಟ್ಟಿನಲ್ಲಿ ಆಯೋಜಿಲಾಗಿದೆ ತಾಲೂಕಿನ ಕ್ರೀಡಾಭಿಮಾನಿಗಳು ಸಾರ್ವಜನಿಕರು ಈ ಕ್ರೀಡಾಕೂಟಕ್ಕೆ ಆಗಮಿಸಿ ಕ್ರೀಡಾಪಟ್ಟುಗಳಿಗೆ ಪ್ರೋತ್ಸಹಿಸಬೇಕು ಎಂದು ಮನವಿ ಮಾಡಿದರು.

ಬಹುಮಾನಗಳು:
ಪ್ರಥಮ ಬಹುಮಾನ 30.000 ದ್ವಿತೀಯ ಬಹುಮಾನ 20000ರೂ ತೃತೀಯ ಬಹುಮಾನ 15000 ಚತುರ್ಥ ಬಹುಮಾನ 10000 ಸಾವಿರ ಗಳಗಿದೆ ಈ ಪಂದ್ಯಾವಳಿ ಕಾರ್ಯಕ್ರಮವನ್ನು ಜಿಲ್ಲೆಯ ಸಂಸದರಾದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು ಜಿಲ್ಲಾ ಸ್ಪೋರ್ಟ್ಸ ಕ್ಲಬ್ನ ಸದಸ್ಯರು ಅಧ್ಯಕ್ಷರು ಹಾಗೂ ಹಿರಿಯ ಕ್ರೀಡಾಪಟುಗಳು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕುಮದ್ವತಿ ಸ್ಪೋರ್ಟ್ಸ್ ಕ್ಲಬ್ನ ಸದಸ್ಯರಾದ ಶಬ್ಬಿರ್ ಅಹ್ಮದ್, ನಝಾರುಲ್ಲಾ ಮಡ್ಡಿ, ಸತೀಶ್, ರೇಫ್ರೀ ಚೇರ್ಮನ್ ಅರುಣ್ ಕುಮಾರ್, ಇದ್ದರು.
News By: Raghu Shikari