ಸಚಿವ ಸಂಪುಟ ವಿಸ್ತರಣೆ ಉಪ ಚುನಾವಣೆ ಗೆದ್ದವರಿಗಂತೂ ಸ್ಥಾನ ನೀಡುತ್ತೇವೆ; ಸಚಿವ ಕೆ.ಎಸ್ ಈಶ್ವರಪ್ಪ.

ಸಚಿವ ಸಂಪುಟ ವಿಸ್ತರಣೆ ಉಪ ಚುನಾವಣೆ ಗೆದ್ದವರಿಗಂತೂ ಸ್ಥಾನ ನೀಡುತ್ತೇವೆ; ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ :ಸಚಿವ ಸಂಪುಟ ವಿಸ್ತರಣೆ ಕುರಿತು ಕತೂಹಲ ಹೇಳಿಕೆಯನ್ನ ಸಚಿವ ಈಶ್ವರಪ್ಪ ನೀಡಿದ್ದಾರೆ
ಸಂಕ್ರಾಂತಿ ನಂತರ ಸರ್ಕಾರ ಸಚಿವ ಸಂಪುಟಕ್ಕೆ ಮುಂದಾಗಲಿದೆಯೋ ಅಥವಾ ಪುನರ್ ರಚನೆ ಆಗಲಿದೆಯೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ರಾಜೀನಾಮೆ ನೀಡಿ ಬಂದ ಶಾಸಕರು ಉಪಚುನಾವಣೆಯಲ್ಲಿ ಗೆದ್ದವರಿಗೆ ಸ್ಥಾನ ಮಾನ ನೀಡಲಾಗುವುದು ಎಂದರು.

ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸಚಿವ ಸಂಪುಟದ ವಿಸ್ತಾರಣೆ ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವೆಂದು ಹೇಳಿದರು

ಆರ್.ಶಂಕರ್ ನ್ನ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗುವುದಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್.ಈಶ್ವರಪ್ಪ ಆರ್.ಶಂಕರ್ ಕುರಿತು ಸುಪ್ರೀಂ ಕೋರ್ಟ್ ಕೆಲವು ನಿರ್ದೇಶನ ನೀಡಿದೆ. 6 ತಿಂಗಳಲ್ಲಿ ಶಾಸಕರಾಗಿ ಅಥವಾ ಎಂಎಲ್ ಸಿ ಗಳಾಗಿ ಬರಬೇಕೆಂಬ ನಿರ್ದೇಶನವಿದೆ. ಅದರಂತೆ ನಡೆದುಕೊಳ್ಳುವುದು ಸಹ ಪಕ್ಷದ ಹೈಕಮಾಂಡ್ ರಿಗೆ ಬಿಟ್ಟ ವಿಷಯ ಎಂದರು.

ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಯಲ್ಲಿ ಕಾತೆ ತೆಗೆಯುತ್ತಿರುವುದು ಸರಿಯಿಲ್ಲ. ನ್ಯಾಯಾಲಯದಲ್ಲಿ ಈಗಾಗಲೇ ಈ ವಿಚಾರವಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎಂಇಎಸ್ ಸಂಘಟನೆ ಗಡಿ ವಿಚಾರದಲ್ಲಿ ತಗಾದೆ ತೆಗೆದಿದೆ. ಇದನ್ನ ಖಂಡಿಸಲಾಗುವುದು. ಕಾನೂನುಬದ್ಧವಾಗಿ ಬಂದರೆ ಮಾತ್ರ ಗಡಿವಿಚಾರದಲ್ಲಿ ಹಿಂದೆ ಸರಿಯಬಹುದೇವಿನಃ ಬೇರೆಯಾವ ದುಷ್ಕೃತ್ಯಕ್ಕೆ ಭಾಗಿ ನಡೆಯುವುದಿಲ್ಲ ಎಂದರು.

AdminShikariNews

Leave a Reply

Your email address will not be published. Required fields are marked *

error: Content is protected !!