ರಾಜ್ಯದಲ್ಲಿ 35 ಕೋವಿಡ್ ಸಕ್ರಿಯ ಪ್ರಕರಣ :ಜನರು ಆತಂಕ ಪಡುವ ಅಗತ್ಯವಿಲ್ಲ :ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ 35 ಕೋವಿಡ್ ಸಕ್ರಿಯ ಪ್ರಕರಣ :ಜನರು ಆತಂಕ ಪಡುವ ಅಗತ್ಯವಿಲ್ಲ :ಸಚಿವ ದಿನೇಶ್ ಗುಂಡೂರಾವ್
Facebook
Twitter
LinkedIn
WhatsApp

ಬೆಂಗಳೂರು: ಕೋವಿಡ್-19 ಈಗ ನಮ್ಮ ಜೀವನದ ಭಾಗ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ಬೆಂಗಳೂರಿನಲ್ಲಿ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದರೂ, ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ವರ್ಷ ಇಲ್ಲಿಯವರೆಗೆ, 35 ಪ್ರಕರಣಗಳು ವರದಿಯಾಗಿದ್ದು, ಕಳೆದ 15 ದಿನಗಳಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು, ಗರ್ಭಿಣಿಯರು ಮತ್ತು ಮಕ್ಕಳು ಜನದಟ್ಟಣೆಯ ಸ್ಥಳಗಳಿಗೆ ಭೇಟಿ ನೀಡುವಾಗ ಜಾಗರೂಕರಾಗಿರಬೇಕು. ಜನದಟ್ಟಣೆಯ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದಾರೆ. ತೀವ್ರ ಉಸಿರಾಟದ ಸೋಂಕು ಪ್ರಕರಣಗಳಿಗೆ ಮಾತ್ರ ಕೋವಿಡ್-19 ಪರೀಕ್ಷೆಗಳು ಕಡ್ಡಾಯ ಎಂದು ಸಚಿವರು ತಿಳಿಸಿದ್ದಾರೆ.